ಮನೆ ಬಾಗಿಲು ತೆಗೆದು ಹೊರಗೆ ಬರುತ್ತಿದ್ದಂತೆ ಹಿಂಬದಿಯಿಂದ ಬಂದು ಹೊಡೆದು ಮೊಬೈಲ್ ಕಸಿದ ದುಷ್ಕರ್ಮಿಗಳು

SHIVAMOGGA LIVE NEWS | 17 DECEMBER 2022

ಶಿವಮೊಗ್ಗ : ಕೆಲಸಕ್ಕೆ ಹೊರಡಲು ಬೆಳಗಿನ ಜಾವ ಮನೆಯಿಂದ ಹೊರ ಬಂದ ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ಕಸಿದು (mobile phone) ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

Shimoga Nanjappa Hospital

ಮಹಾನಗರ ಪಾಲಿಕೆ ನೀರು ಗಂಟಿಯಾಗಿ ಕೆಲಸ ಮಾಡುತ್ತಿರುವ ತೇಜೇಶ್ ಎಂಬುವವರ ಮೇಲೆ ದಾಳಿ ನಡೆಸಲಾಗಿದೆ.

(mobile phone)

ಬೆಳಗಿನ ಜಾವ ನಡೆದ ಘಟನೆ

ತೇಜೇಶ್ ಅವರು ಸೀಗೆಹಟ್ಟಿ ಭಾಗದಲ್ಲಿ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಎಲ್ಲಾ ಬೀದಿಗಳಿಗೆ ನೀರು ಬಿಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ಹೊರಡಲು ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಮನೆಯಿಂದ ಹೊರ ಬಂದು, ಬೈಕ್ ಶುರು ಮಾಡುವ ಹೊತ್ತಿಗೆ ದುಷ್ಕರ್ಮಿಗಳು ಹಿಂಬದಿಯಿಂದ ಬಂದು ಹಿಡಿದುಕೊಂಡಿದ್ದಾರೆ. ಹಣ, ಮೊಬೈಲ್ ಏನಿದ್ದರು ಕೊಡುವಂತೆ ಬೆದರಿಸಿದ್ದಾರೆ. ತೇಜೇಶ್ ಒಪ್ಪದಿದ್ದಾಗ ಹೊಡೆಯಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಬ್ದ ಕೇಳಿ ತೇಜೇಶ್ ಪೋಷಕರು ಮನೆಯಿಂದ ಹೊರ ಬಂದಿದ್ದಾರೆ. ಆಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ವೇಳೆ ತೇಜೇಶ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್, ವಾರಸುದಾರರಿಗೆ ಮರಳಿತು ಕೋಟಿ ಕೋಟಿಯ ವಸ್ತುಗಳು

ಘಟನೆ ಸಂಬಂದ ಆರೋಪಿಗಳನ್ನು ಬಚ್ಚಾ ಫೈಸಲ್ ಮತ್ತು ಅಫ್ತಾಬ್ ಕುಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shimoga Nanjappa Hospital

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗ ಬಳಿ ಕಾರು ಪಲ್ಟಿ, ಬೆಂಗಳೂರಿನ ನಾಲ್ವರಿಗೆ ಗಾಯ, ಹೇಗಾಯ್ತು ಘಟನೆ?