ಶಿವಮೊಗ್ಗದ ಆಲ್ಕೊಳ ಬಳಿ ಚರಂಡಿಯಲ್ಲಿ ಬೃಹತ್‌ ಹೆಬ್ಬಾವು ಪತ್ತೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ನಗರದ ಆಲ್ಕೊಳ ಸಮೀಪದ ಸುಲ್ತಾನ್ ಮೊಹಲ್ಲಾದಲ್ಲಿ ರಾತ್ರಿ ವೇಳೆ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡು ಸಾರ್ವಜನಿಕರನ್ನು ಆತಂಕ ಮೂಡಿಸತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಉರಗ ರಕ್ಷಣ ಸ್ನೇಕ್‌ ಕಿರಣ್‌ ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಜೂನ್ 25ರ ರಾತ್ರಿ ಮಂದಾರ ಮಂದಿರದ ಹತ್ತಿರದ 2ನೇ ಕ್ರಾಸ್‌ನಲ್ಲಿರುವ ಚಿನ್ನಪ್ಪ ಎಂಬುವವರ ಮನೆ ಎದುರಿನ ಚರಂಡಿಯಲ್ಲಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಸ್ನೇಕ್ ಕಿರಣ್ ಅವರು ಕಾರ್ಯಾಚರಣೆ ನಡೆಸಿ, ಚರಂಡಿಯಲ್ಲಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

Snake-Kiran-Rescue-Python-at-Alkola-in-Shimoga