ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಸೆಪ್ಟೆಂಬರ್ 2021
ಟೈಪಿಂಗ್ ಕ್ಲಾಸ್ ಮುಗಿಸಿಕೊಂಡು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನ ಮೊಬೈಲ್ ಫೋನನ್ನು ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ. ಬಸವನಗುಡಿಯಲ್ಲಿ ಘಟನೆ ವರದಿಯಾಗಿದೆ.
ಉದಯ ಶಂಕರ್ ಎಂಬುವವರಿಗೆ ಸೇರಿದ ಮೊಬೈಲ್ ಕಳವು ಮಾಡಲಾಗಿದೆ. ಜಯನಗರದಲ್ಲಿ ಟೈಪಿಂಗ್ ಕ್ಲಾಸ್ ಮುಗಿಸಿ, ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ.
ಉದಯ ಶಂಕರ್, ಬಸವನಗುಡಿಯಿಂದ ಬಾಲರಾಜ್ ಅರಸ್ ರಸ್ತೆ ಕಡೆಗೆ ತೆರಳುತ್ತಿದ್ದರು. ಆಗ ಹಿಂದಿನಿಂದ ಬೈಕ್’ನಲ್ಲಿ ಬಂದ ಇಬ್ಬರು ಯುವಕರು, ಉದಯ ಶಂಕರ್ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ.
ಈ ವೇಳೆ ಉದಯ ಶಂಕರ್ ಅವರು ಕಳ್ಳ ಎಂದು ಜೋರಾಗಿ ಕೂಗಿಕೊಂಡು ಅವರ ಹಿಂದೆಯೇ ಓಡಿದ್ದಾರೆ. ಆದರೆ ಬೈಕ್’ನಲ್ಲಿದ್ದ ಕಳ್ಳರು ವೇಗವಾಗಿ ಹೋಗಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200