ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್‌ ಕದ್ದ ಮಂಗ, ಒಂದು ಗಂಟೆ ಮರವೇರಿ ಕುಳಿತು ಪ್ರಹಸನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಂಜಪ್ಪ ಆಸ್ಪತ್ರೆ ಸಿಬ್ಬಂದಿಯೊಬ್ಬರ ಮೊಬೈಲ್‌ (Mobile) ಕಸಿದುಕೊಂಡ ಮಂಗವೊಂದು ಮರ ಹತ್ತಿ ಕುಳಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತ್ತು. ಸುಮಾರು ಒಂದು ಗಂಟೆಯ ಪ್ರಹಸನದ ಬಳಿಕ ಮಂಗ ಮೊಬೈಲ್‌ ಬಿಟ್ಟು ಪರಾರಿಯಾಗಿದೆ.

ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ, ಆಸ್ಪತ್ರೆ ಸಿಬ್ಬಂದಿ ರೇಷ್ಮಾ ಎಂಬುವವರಿಗೆ ಸೇರಿದ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿತ್ತು.

-Monkey-catches-mobile-phone-at-Nanjappa-Hospital

ಮೊಬೈಲ್‌ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಜನರ ಕುತೂಹಲ ಮೂಡಿಸಿತ್ತು. ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಬಹು ಹೊತ್ತು ಕುಳಿತುಕೊಂಡಿತ್ತು. ಆಗಾಗ ಮೊಬೈಲನ್ನು ಎದೆಗವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್‌ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್‌ ಪರದೆ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್‌ ಕಿವಿಗೆ ಹಿಡಿದು ಕುಳಿತಿತ್ತು.

https://chat.whatsapp.com/JPJ0lTQsTKf365Fqu6Q7cd

ಮೊಬೈಲ್‌ ಹಿಡಿದು ಮರವೇರಿದ್ದ ಮಂಗದ ಹಾವಾಭಾವ ಗಮನಿಸಲು ದೊಡ್ಡ ಸಂಖ್ಯೆಯ ಜನರು ರಸ್ತೆ ಬದಿ ನಿಂತಿದ್ದರು. ಮಂಗದ ಕೈಯಿಂದ ಮೊಬೈಲ್‌ ಕಸಿದುಕೊಳ್ಳಲು ಏನೆಲ್ಲ ಮಾಡಬಹುದು ಎಂದು ಚರ್ಚಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯ ಸೆರೆ ಹಿಡಿಯುತ್ತಿದ್ದರು. ಸವಾರರು ಮಂಗಾಟ ಗಮನಿಸಲು ವಾಹನ ನಿಲ್ಲಿಸುತ್ತಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು.

-Monkey-catches-mobile-phone-at-Nanjappa-Hospital

ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಕಟ್ಟಡದ ಮೇಲೇರಿಗೆ ಮಂಗಕ್ಕೆ ಬಾಳೆ ಹಣ್ಣು ತೋರಿಸಿ ಗಮನ ಸೆಳೆದರು. ಆಸೆಯಿಂದ ಕಟ್ಟಡದ ಮೇಲೆ ಬಂದು ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದರು. ಕೊನೆಗೆ ಬಾಳೆ ಹಣ್ಣು ಎತ್ತಿಕೊಂಡು, ಮೊಬೈಲ್‌ ಬಿಟ್ಟು ಮಂಗ ಪರಾರಿಯಾಯಿತು.

-Monkey-catches-mobile-phone-at-Nanjappa-Hospital

ಇದನ್ನೂ ಓದಿ » ಚಂದ್ರಗುತ್ತಿ ಹೋಬಳಿ, ಶ್ವಾನಗಳ ದಾಳಿಗೆ ಜಿಂಕೆ ಬಲಿ

-Monkey-catches-mobile-phone-at-Nanjappa-Hospital

-Monkey-catches-mobile-phone-at-Nanjappa-Hospital

-Monkey-catches-mobile-phone-at-Nanjappa-Hospital

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 11, 2025

Leave a Comment