ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 MARCH 2024
SHIMOGA : ಚನಾವಣಾ ಪ್ರಚಾರದ ಒತ್ತಡದ ನಡುವೆ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು. ಮೈ ತುಂಬ ಬಣ್ಣ ಹಚ್ಚಿಸಿಕೊಂಡು ಯುವಕರ ಜೊತೆಗೆ ಡಾನ್ಸ್ ಮಾಡಿದರು.
ಗೋಪಿ ಸರ್ಕಲ್‌ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಆಯೋಜಿಸಿದ್ದ ರೈನ್ ಡಾನ್ಸ್ ಮತ್ತು ಡಿಜೆ ಸಂಭ್ರಮದಲ್ಲಿ ಸಂಸದ ರಾಘವೇಂದ್ರ ಭಾಗವಹಿಸಿದ್ದರು. ಇದೇ ವೇಳೆ ಅಲ್ಲಿ ಸೇರಿದ್ದವರು ಸಂಸದ ರಾಘವೇಂದ್ರ ಅವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.
ಕಾಲೇಜು ದಿನಗಳು ನೆನಪಾದವು
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ರಾಘವೇಂದ್ರ, ಸಂಭ್ರಮದಿಂದ ಹೋಳಿ ಆಚರಣೆ ಮಾಡಲಾಗುತ್ತಿದೆ. ಶಿವನ ತಪಸ್ಸು ಭಂಗ ಮಾಡಲು ಹೋದ ಕಾಮನ ದಹನವಾಗಿತ್ತು. ಅದೇ ರೀತಿ ಈ ದೇಶದ ಸಮಸ್ಯೆಗಳು ದೂರಾಗಿ ದೇಶಕ್ಕೆ ಒಳಿತಾಗಬೇಕಿದೆ. ಇವತ್ತಿನ ಆಚರಣೆ ಗಮನಿಸಿ ನನ್ನ ಕಾಲೇಜು ಜೀವನ ನೆನಪಾಯಿತು. ಆಗೆಲ್ಲ ಸ್ನೇಹಿತರ ಜೊತೆಗೆ ಆಚರಣೆ ಮಾಡುತ್ತಿದ್ದೆ. ಇವತ್ತು ಯುವಕರ ಜೊತೆ ಹಬ್ಬ ಆಚರಿಸಿ ಖುಷಿಯಾಯಿತು ಎಂದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅದ್ಧೂರಿ ಹೋಳಿ ಆಚರಣೆ, ಡಿಜೆಗೆ ಭರ್ಜರಿ ರೈನ್ ಡಾನ್ಸ್, ಹೇಗಿತ್ತು? ಇಲ್ಲಿವೆ ಫೋಟೊಗಳು
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






