ಶಿವಮೊಗ್ಗದಲ್ಲಿ BSNL ಕಚೇರಿಗೆ ಸಂಸದ ರಾಘವೇಂದ್ರ ಭೇಟಿ, ಮಹತ್ವದ ಮೀಟಿಂಗ್‌, ಯಾವೆಲ್ಲ ವಿಷಯ ಚರ್ಚೆಯಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 JULY 2024

SHIMOGA : ನೆಟ್‌ವರ್ಕ್‌ ಸಮಸ್ಯೆ ಮತ್ತು ಟವರ್‌ ಅಳವಡಿಕೆ ಸಂಬಂಧ BSNL ಹಿರಿಯ ಅಧಿಕಾರಿಗಳ ಜೊತೆಗೆ ಸಂಸದ ಬಿ.ವೈ.ರಾಘವೇಂದ್ರ ಚರ್ಚೆ ನಡೆಸಿದರು. ಸಾಗರ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್‌ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ಈವರೆಗೂ ಜಿಲ್ಲೆಯಲ್ಲಿ ಟವರ್ ಅಳವಡಿಕೆ ಕಾಮಗಾರಿ ಸಾಗಿರುವ ಹಂತ, ಟವರ್ ಅಭಿವೃದ್ಧಿಗೆ ಅಗತ್ಯ ಅನುದಾನ ಕೊರತೆ ಉಂಟಾಗಿರುವುದು, ನೂತನ ಟವರ್ ಅಳವಡಿಕೆಗೆ ಸಾರ್ವಜನಿಕರಿಂದ ಪ್ರಸ್ತಾವನೆ ಬಂದಿರುವುದು, ಅರಣ್ಯ ಇಲಾಖೆಯಿಂದ ನೂತನ ಟವರ್ ಅಳವಡಿಕೆಗೆ ತೊಂದರೆಯಾಗಿರುವುದು, ಟವರ್ ಅಳವಡಿಕೆಯಾಗಿ ನಂತರ ಅಗತ್ಯ ತಾಂತ್ರಿಕ ಸಲಕರಣೆ ಅಳವಡಿಸುವ ಬಾಕಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

BY-Raghavendra-meeting-at-BSNL-Office-in-Shimoga

ಟವರ್‌ ಅಳವಡಿಕೆ ಕುರಿತು ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಗವೇಂದ್ರ ಅಗತ್ಯ ಸಲಹೆ ನೀಡಿದರು. ಶೀಘ್ರವೇ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ – ಸೊಪ್ಪು ತರಲು ಕಾಡಿಗೆ ಹೋಗಿದ್ದ ವ್ಯಕ್ತಿ ಮೇಲೆ ಹಂದಿ ದಾಳಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment