ಶಿವಮೊಗ್ಗದಲ್ಲಿ BSNL ಕಚೇರಿಗೆ ಸಂಸದ ರಾಘವೇಂದ್ರ ಭೇಟಿ, ಮಹತ್ವದ ಮೀಟಿಂಗ್‌, ಯಾವೆಲ್ಲ ವಿಷಯ ಚರ್ಚೆಯಾಯ್ತು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 10 JULY 2024

SHIMOGA : ನೆಟ್‌ವರ್ಕ್‌ ಸಮಸ್ಯೆ ಮತ್ತು ಟವರ್‌ ಅಳವಡಿಕೆ ಸಂಬಂಧ BSNL ಹಿರಿಯ ಅಧಿಕಾರಿಗಳ ಜೊತೆಗೆ ಸಂಸದ ಬಿ.ವೈ.ರಾಘವೇಂದ್ರ ಚರ್ಚೆ ನಡೆಸಿದರು. ಸಾಗರ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್‌ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಈವರೆಗೂ ಜಿಲ್ಲೆಯಲ್ಲಿ ಟವರ್ ಅಳವಡಿಕೆ ಕಾಮಗಾರಿ ಸಾಗಿರುವ ಹಂತ, ಟವರ್ ಅಭಿವೃದ್ಧಿಗೆ ಅಗತ್ಯ ಅನುದಾನ ಕೊರತೆ ಉಂಟಾಗಿರುವುದು, ನೂತನ ಟವರ್ ಅಳವಡಿಕೆಗೆ ಸಾರ್ವಜನಿಕರಿಂದ ಪ್ರಸ್ತಾವನೆ ಬಂದಿರುವುದು, ಅರಣ್ಯ ಇಲಾಖೆಯಿಂದ ನೂತನ ಟವರ್ ಅಳವಡಿಕೆಗೆ ತೊಂದರೆಯಾಗಿರುವುದು, ಟವರ್ ಅಳವಡಿಕೆಯಾಗಿ ನಂತರ ಅಗತ್ಯ ತಾಂತ್ರಿಕ ಸಲಕರಣೆ ಅಳವಡಿಸುವ ಬಾಕಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

BY-Raghavendra-meeting-at-BSNL-Office-in-Shimoga

ಟವರ್‌ ಅಳವಡಿಕೆ ಕುರಿತು ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಗವೇಂದ್ರ ಅಗತ್ಯ ಸಲಹೆ ನೀಡಿದರು. ಶೀಘ್ರವೇ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ – ಸೊಪ್ಪು ತರಲು ಕಾಡಿಗೆ ಹೋಗಿದ್ದ ವ್ಯಕ್ತಿ ಮೇಲೆ ಹಂದಿ ದಾಳಿ

Leave a Comment