ಶಿವಮೊಗ್ಗ: ಡಾ. ಸಿದ್ದಲಿಂಗಯ್ಯ ಅವರ ಕಾವ್ಯಗಳನ್ನು ಆಧರಿಸಿದ ‘ನನ್ನ ಜನಗಳು’ ನಾಟಕವನ್ನು ಮುಖಾಮುಖಿ ಎಸ್‌ಟಿ ರಂಗತಂಡ ಜಿಲ್ಲಾ ಘಟಕ ಹಾಗೂ ಏಕತಾರಿ ಸಾಂಸ್ಕೃತಿಕ ಸಂಘಟನೆ, ಮೈಸೂರು ಘಟಕ ವತಿಯಿಂದ ಅ.1ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಎಸ್‌ಟಿ ರಂಗತಂಡದ ಪೋಷಕ ಕೆ.ಜಿ. ವೆಂಕಟೇಶ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರ ಕಾವ್ಯಗಳಲ್ಲಿನ ಜನಜೀವನ, ಸಾಮಾಜಿಕ ಅಸಮಾನತೆ ಮತ್ತು ಜನರ ನೋವು–ನಲಿವುಗಳನ್ನು ರಂಗರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ. ‘ನನ್ನ ಜನರೇ ನನ್ನ ಶಕ್ತಿ, ನನ್ನ ಉಸಿರು. ಅವರ ಕಥೆಗಳೇ ಈ ನಾಟಕದ ಹೃದಯ’ ಎಂಬ ಆಶಯದೊಂದಿಗೆ ನಾಟಕ ಮೂಡಿಬರಲಿದೆ. ಡಾ. ಹೆಚ್. ಜನಾರ್ಧನ್ ಸಂಗೀತ ನೀಡಿದ್ದು, ದೇವಾನಂದ ವರಪ್ರಸಾದ್ ನಿರ್ದೇಶಿಸಿದ್ದಾರೆ ಎಂದರು.

ನಾಟಕದಲ್ಲಿ ಸುಮಲತ ಎಸ್., ಬಿ. ಶೋಭಾ ಶಿವರಾಜು, ಜ್ಯೋತಿ ಶಿವನಂಜ, ಶ್ವೇತ ಎಂ., ಸ್ವಪ್ನ ಎಂ., ನಂದಿನಿ, ಸ್ಪಂದನ ಹೆಚ್.ಡಿ., ಪುಷ್ಪಲತಾ ನಾರಾಯಣ್, ಶೃತಿ ಎಸ್. ಭಾರದ್ವಾಜ್, ಮಮತಶ್ರೀ ಎಸ್., ವಸಂತ ಕೆ.ಎಸ್., ಹಾ.ರಾ. ಚಂದ್ರಶೇಖರ್ ಹಾನಗಲ್, ರಮ್ಯ ಆರ್., ಹೆಚ್.ಪಿ. ಮಲ್ಲಿಕಾರ್ಜುನ ಸ್ವಾಮಿ, ನಿರ್ಮಲದೇವಿ, ಮಲ್ಲೇಶ ಎನ್., ಗಾಯತ್ರಿ ಎಸ್., ಶ್ವೇತ ಎಚ್.ಪಿ., ಶ್ವೇತ ವೈ.ಎಸ್. ಹಾಗೂ ಮಾಸ್ಟರ್ ಸಮನ್ಯು ಸಿ. ಅಭಿನಯಿಸಲಿದ್ದಾರೆ. ಪ್ರವೇಶ ಶುಲ್ಕ ₹99. ಕಾರ್ಯಕ್ರಮದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ 97399 64726, 94820 21074 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎ. ಮಹೇಂದ್ರ, ಮಂಜು ರಂಗಾಯಣ, ಹೊನ್ನಾಳಿ ಚಂದ್ರಶೇಖರ್, ಹಾಲಪ್ಪ ಇದ್ದರು.