ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

ಶಿವಮೊಗ್ಗ: ನವುಲೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ (hostel) ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಸ್ಕೀಮ್‌ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್‌

ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶೌಚಾಲಯ ಹಾಗೂ ಹಾಸ್ಟೆಲ್ ಆವರಣವು ಶುಚಿಯಾಗಿಲ್ಲ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಓದಲು ಅಗತ್ಯ ಪುಸ್ತಕಗಳಿಲ್ಲ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಇದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Nauvle-Government-Hostel-students-memorandum.

ಮಲಗಲು ಸರಿಯಾದ ಹಾಸಿಗೆಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಿಟಕಿಗಳಿಗೆ ಗಾಜುಗಳಿಲ್ಲ, ಫ್ಯಾನ್ ಮತ್ತು ಬಲ್ಬ್‌ಗಳು ಕೆಟ್ಟು ಹೋಗಿವೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸೊಳ್ಳೆ ಪರದೆಗಳ ವ್ಯವಸ್ಥೆಯೂ ಇಲ್ಲ. ಅಡುಗೆ ತಯಾರಿಯಲ್ಲಿ ಮೆನು ಪಟ್ಟಿಯನ್ನು ಪಾಲಿಸುತ್ತಿಲ್ಲ. ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ ಹಾಗೂ ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿದ್ದಾರೆ.

ಹಾಸ್ಟೆಲ್ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಹೈಮಾಸ್ಟ್ ಲೈಟ್ ಕೆಟ್ಟು ಹೋಗಿದ್ದು, ರಾತ್ರಿ ವೇಳೆ ವಿದ್ಯಾರ್ಥಿಗಳು ಕತ್ತಲಲ್ಲಿ ಓಡಾಡುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 31, 2026

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 31 ಮಾರ್ಚ್‌ 2026

ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 31 ಮಾರ್ಚ್‌ 2026

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

ವರದಹಳ್ಳಿಯಲ್ಲಿ ಶ್ರೀಧರ ಸ್ವಾಮೀಜಿ ಆರಾಧನಾ ಮಹೋತ್ಸವ, ಏನೇನು ಕಾರ್ಯಕ್ರಮ ಇರಲಿದೆ?

ವರದಹಳ್ಳಿಯಲ್ಲಿ ಶ್ರೀಧರ ಸ್ವಾಮೀಜಿ ಆರಾಧನಾ ಮಹೋತ್ಸವ, ಏನೇನು ಕಾರ್ಯಕ್ರಮ ಇರಲಿದೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

Leave a Comment