ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್‌

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬದ ಸಂದರ್ಭ ಇಲ್ಲಿನ ಮೃಗಾಲಯಕ್ಕೆ ಇಂದೋರ್‌ ಮತ್ತು ಔರಂಗಾಬಾದ್‌ನಿಂದ ಪ್ರಾಣಿಗಳು (Animals) ಆಗಮಿಸಲಿವೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಮೃಗಾಲಯಕ್ಕೆ ಅಧಿಕಾರಿಗಳು ಭೇಟಿ

ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯದ ಅಧಿಕಾರಿಗಳು ಇಂದು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳ ವಿನಿಮಯಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು, ಶಿವಮೊಗ್ಗ ಮೃಗಾಲಯದ ಅಧಿಕಾರಿಗಳು ಆಗಸ್ಟ್‌ ತಿಂಗಳಲ್ಲಿ ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯಗಳಿಗೆ ಭೇಟಿ ನೀಡಿದ್ದರು.

Nanjappa Hospital Advertisement

Lion-Tiger-Safari-Tyavrekoppa-in-Shimoga.

ದಸರಾ ಹಬ್ಬಕ್ಕೆ ಹೊಸ ಪ್ರಾಣಿಗಳು

ಪ್ರಾಣಿಗಳ ವಿನಿಮಯ ಯೋಜನೆ ಅಡಿ ದಸರಾ ಹಬ್ಬದ ಸಂದರ್ಭದಲ್ಲೆ ಹೊಸ ಪ್ರಾಣಿಗಳು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಾಧಾಮಕ್ಕೆ ಆಗಮಿಸಲಿವೆ. ಅ.2ರಂದು ಪ್ರಾಣಿಗಳು ಆಗಮಿಸುತ್ತವೆ ಎಂದು ಅಮರಾಕ್ಷರ ತಿಳಿಸಿದ್ದಾರೆ.

ಔರಂಗಾಬಾದ್‌ ಮೃಗಾಲಯದಿಂದ 1 ಗಂಡು ಬಿಳಿ ಹುಲಿ, 2 ಹೆಣ್ಣು ಬೆಂಗಾಲ್‌ ಟೈಗರ್ಸ್‌, ಇಂದೋರ್‌ ಮೃಗಾಲಯದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಗಂಡು ಬೆಂಗಾಲ್‌ ಟೈಗರ್‌ ಬರಲಿವೆ.

ನಟ ಸಚಿನ್‌ ಚಲುವರಾಯಸ್ವಾಮಿ ಅಭಿನಯದ ಕಮಲ್‌ ‍ಶ್ರೀದೇವಿ ಸಿನಿಮಾ ಟ್ರೇಲರ್‌

ಶಿವಮೊಗ್ಗದಿಂದ ವಿನಿಮಯವಾಗಲಿವೆ ಪ್ರಾಣಿಗಳು

ಇನ್ನು, ತ್ಯಾವರೆಕೊಪ್ಪ ಮೃಗಾಲಯದಿಂದ ಸೆ.25ರಂದು ಕೆಲವು ಪ್ರಾಣಿಗಳನ್ನು ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವಾಗ?

ಔರಂಗಾಬಾದ್‌ ಮೃಗಾಲಯಕ್ಕೆ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಕರಡಿ, ಒಂದು ಗಂಡು ಮತ್ತು ಒಂದು ಹೆಣ್ಣು ನರಿಯನ್ನು ರವಾನಿಸಲಾಗುತ್ತಿದೆ. ಇಂದೋರ್‌ ಮೃಗಾಲಯಕ್ಕೆ ಒಂದು ಕಾಡುಕೋಣ, ಎರಡು ಗಂಡು ಮತ್ತು ಎರಡು ಹೆಣ್ಣು ಆಸ್ಟ್ರಿಚ್‌ಗಳನ್ನು ರವಾನಿಸಲಾಗುತ್ತಿದೆ ಎಂದು ಅಮರಾಕ್ಷರ ತಿಳಿಸಿದ್ದಾರೆ.  

JNNCE-Admission-Advt-scaled

news, Shivamogga, zoo, Tyavarekoppa, animal exchange, white tiger, Bengal tiger, lion, local news, tourism, Karnataka

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment