ಶಿವಮೊಗ್ಗದಲ್ಲಿ ಪೊಲೀಸ್‌ ವ್ಯಾಯಾಮ ಶಾಲೆ, ಐಜಿಪಿ ಏನೆಲ್ಲ ಸಲಹೆ ನೀಡಿದರು?

 ಶಿವಮೊಗ್ಗ  LIVE 

ಶಿವಮೊಗ್ಗ: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕೆಲಸದ ಒತ್ತಡದ ನಡುವೆಯೂ ದೈಹಿಕ ಆರೋಗ್ಯ (police gym) ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡ ಹೇಳಿದರು.

ನಗರದ ಡಿಎಆ‌ರ್ ಆವರಣದಲ್ಲಿ ನಿರ್ಮಿಸಲಾಗಿರುವ ಪೊಲೀಸ್ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸರಿಗಾಗಿ ವ್ಯಾಯಾಮ ಶಾಲೆ ತೆರೆದಿರುವುದು ಒಳ್ಳೆ ಆಲೋಚನೆ. ಪೊಲೀಸ್‌ ಇಲಾಖೆಯ ಕರ್ತವ್ಯಗಳಲ್ಲಿ ಹಾಗೂ ಒತ್ತಡದ ನಡುವೆ ಆರೋಗ್ಯ ಮತ್ತು ಕುಟುಂಬಕ್ಕೆ ಸಮಯಾವಕಾಶ ನೀಡುವುದು ಕೊನೆಯ ಆಯ್ಕೆಯಾಗಿರುತ್ತದೆ. ರಾತ್ರಿ ಪಾಳಿ ಕೆಲಸ, ಬಂದೋಬಸ್ತ್ ಹಾಗೂ ಇತರೆ ಒತ್ತಡದ ಕರ್ತವ್ಯದಲ್ಲಿದ್ದಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದರು.

ಉತ್ತಮ ಆರೋಗ್ಯಕ್ಕಾಗಿ ದಿನದ ಒಂದಿಷ್ಟು ಸಮಯ ವ್ಯಾಯಾಮಕ್ಕೆ ಸಮಯ ಕೊಡಬೇಕು. ಆಗ ನಿಮ್ಮ ಆರೋಗ್ಯವಲ್ಲದೆ ಕುಟುಂಬದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಕರ್ತವ್ಯದಲ್ಲೂ ಉತ್ತಮ ಪ್ರಗತಿ ಸಾಧಿಸಬಹುದು ಎಂದರು.

Police-Gym-inaugurated-by-IGP-Ravikanthe-Gowda.

ಇದನ್ನೂ ಓದಿ » ಈಶ್ವರಪ್ಪ ನೇತೃತ್ವದ ಕಾರ್ಯಕ್ರಮ, ಶಿವಮೊಗ್ಗ ವಕೀಲರಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು, ಯಾಕೆ?

ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ.ಕಾರ್ಯಪ್ಪ, ರಮೇಶ್‌ಕುಮಾರ್ ಮತ್ತಿತರರು ಇದ್ದರು.

Police-Gym-inaugurated-by-IGP-Ravikanthe-Gowda.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment