ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್‌ ಪೀಸ್‌ ಪೀಸ್‌, ಮುಂಭಾಗ ಜಖಂ, ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ವಾಹನಗಳ ವೇಗ ನಿಯಂತ್ರಣ ಮತ್ತು ಅಪಘಾತ ತಪ್ಪಿಸಲು ಹಾಕಿದ್ದ ಹಂಪ್‌ಗಳಿಂದಾಗಿಯೇ (speed breakers) ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಅಪಘಾತಗಳಾಗಿವೆ. ಹೊಸ ಹಂಪ್‌ಗಳನ್ನು ನಿರ್ಮಿಸಿ ಮುಂಜಾಗ್ರತೆ ವಹಿಸದೆ ಇರುವುದೇ ಅಪಘಾಕ್ಕೆ ಕಾರಣವಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಆಟೋ ಪಲ್ಟಿ, ವಾಹನ ಸಾವರರಿಗೆ ಗಾಯ

ನಗರದ ವಿವಿಧೆಡೆ ಬುಧವಾರ ಹೊಸ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಶರಾವತಿ ನಗರದ ಚಾನಲ್‌ ಪಕ್ಕದ ರಸ್ತೆಯಲ್ಲಿಯು ಹೊಸತಾಗಿ ಹಂಪ್‌ ಹಾಕಲಾಗಿದೆ. ಹೊಸ ಹಂಪ್‌ಗಳ ಮಾಹಿತಿ ಇಲ್ಲದೆ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

goods-auto-mishap-due-to-road-humps-in-Shimoga-sharavathi-nagara

ಶರಾವತಿ ನಗರದಲ್ಲಿ ಕಳೆದ ರಾತ್ರಿ ಗೂಡ್ಸ್‌ ಆಟೋ ಹಂಪ್‌ ಹಾರಿ ಪಲ್ಟಿಯಾಗಿದೆ. ಆಟೋದ ಗ್ಲಾಸ್‌ ಒಡೆದಿದ್ದು, ಮುಂಭಾಗ ಜಖಂ ಆಗಿದೆ. ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಹಂಪ್‌ ಹಾಕಿದವರು ಸೂಕ್ತ ಮುನ್ನಚ್ಚರಿಕೆ ವಹಿಸದೆ ಇರುವುದೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ – ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಲ್ಲೆಲ್ಲಿ ತೆರಳಲಿದ್ದಾರೆ?

ಹೊಸ ಹಂಪ್‌ಗಳು ಪ್ರತ್ಯಕ್ಷ

ಶಿವಮೊಗ್ಗ ನಗರದಲ್ಲಿ ವಾಹನಗಳ ವೇಗ ನಿಯಂತ್ರಣ ಮತ್ತು ಅಪಘಾತ ತಪ್ಪಿಸಲು ಹಲವು ರಸ್ತೆಗಳಲ್ಲಿ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಮುಂದುವರೆದ ಭಾಗವಾಗಿ ಬುಧವಾರ ನಗರದ ವಿವಿಧ ರಸ್ತೆಗಳಲ್ಲಿ ಹೊಸ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಇವುಗಳ ಮೇಲೆ ಸಣ್ಣದಾಗಿ ಬಿಳಿ ಪೇಂಟ್‌ನಲ್ಲಿ ಲೈನ್‌ಗಳನ್ನು ಹಾಕಲಾಗಿದೆ.

ಈವರೆಗು ಹಂಪ್‌ಗಳೇ ಇರದ ರಸ್ತೆಯಲ್ಲಿ ದಿಢೀರ್‌ ಹಂಪ್‌ಗಳು ಪ್ರತ್ಯಕ್ಷವಾಗಿರುವುದು, ಸೂಕ್ತ ಮಾರ್ಕ್‌ಗಳು ಇಲ್ಲದಿರುವುದರಿಂದ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಉಷಾ ನರ್ಸಿಂಗ್‌ ಸರ್ಕಲ್‌ನಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಈ ಹಿಂದೆ ದಿಢೀರ್‌ ಪ್ರತ್ಯಕ್ಷವಾದ ಹಂಪ್‌ಗಳಿಂದ ಹಲವರು ಬಿದ್ದು ಗಾಯಗೊಂಡಿದ್ದರು. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಹಂಪ್‌ಗಳಿಗೆ ಬಣ್ಣ ಹಚ್ಚಲಾಗಿತ್ತು.

ಕಳೆದ ರಾತ್ರಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿಯು ಹೊಸ ಹಂಪ್‌ಗಳನ್ನು ಹಾಕಲಾಗಿದೆ. ಆ ರಸ್ತೆಯಲ್ಲಿ ಮಾತ್ರ ಬ್ಯಾರಿಕೇಡ್‌ಗಳನ್ನು ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment