ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೊಸ ರೈಲು, ಜುಲೈ 25ರಿಂದ ಸೇವೆ ಶುರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 19 ಜುಲೈ 2022

ನೈಋತ್ಯ ರೈಲ್ವೆ ವತಿಯಿಂದ ಶಿವಮೊಗ್ಗ ಜಿಲ್ಲೆಗೆ ವಿಶೇಷ ರೈಲು (SPECIAL TRAIN) ಘೋಷಣೆ ಮಾಡಿದೆ. ಜುಲೈ 25ರಿಂದ ಈ ರೈಲು (TRAIN) ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shimoga Nanjappa Hospital

ರೈಲು ಸಂಖ್ಯೆ 16221/16222 ತಾಳಗುಪ್ಪ – ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ. ಈ ಎಕ್ಸ್ ಪ್ರೆಸ್ ರೈಲು ಪ್ರತಿದಿನ ಎರಡು ನಗರಗಳ ನಡುವೆ ಸಂಚರಿಸಲಿದೆ ಎಂದು ತಿಳಿಸಲಾಗಿದೆ.

ರೈಲು ಟೈಮಿಂಗ್ ಏನು

  • ಮೈಸೂರಿನಿಂದ (MYSORE) ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲು ರಾತ್ರಿ 11.30ಕ್ಕೆ ತಾಳಗುಪ್ಪ (TALAGUPPA) ತಲುಪಲಿದೆ.

ಮೈಸೂರಿನಿಂದ – ಬೆಳಗುಳ – ಸಾಗರಕಟ್ಟೆ – ಕೃಷ್ಣರಾಜನಗರ – ಹೊಸ ಅಗ್ರಹಾರ – ಅಕ್ಕಿ ಹೆಬ್ಬಾಳು ಬೀರಹಳ್ಳಿ – ಮಂಡಗೆರೆ – ಹೊಳೆ ನರಸಿಪುರಕ್ಕೆ ಮಧ್ಯಾಹ್ನ 3.50ಕ್ಕೆ ತಲುಪಲಿದೆ. ಮಾವಿನಕರೆ ಮೂಲಕ ಮದ್ಯಾಹ್ನ 4.28ಕ್ಕೆ ಹಾಸನ ತಲುಪಲಿದೆ.

ಬಾಗೇಶಪುರ – ಹಬನಘಟ್ಟ ಮೂಲಕ ಸಂಜೆ 6 ಗಂಟೆಗೆ ಅರಸಿಕರೆ ತಲುಪಲಿದೆ. ಬಾಣವರ -ದೇವನೂರು – ಬಳ್ಳೆಕರೆ – ಕಡೂರು ಬೀರೂರಿಗೆ ಸಂಜೆ 7 ಗಂಟೆಗೆ ತಲುಪಲಿದೆ.

ಸಾವಿಪುರ – ಕಾರಣಹಳ್ಳಿ – ತರೀಕೆರೆ (ರಾತ್ರಿ 7.39) ಮೊಸರಹಳ್ಳಿ – ಭದ್ರಾವತಿ (ರಾತ್ರಿ 8.03ಕ್ಕೆ) – ಶಿವಮೊಗ್ಗ ವಿದ್ಯಾನಗರ (8.19) – ಶಿವಮೊಗ್ಗ ರೈಲ್ವೆ ನಿಲ್ದಣದ (ರಾತ್ರಿ 8.45) – ಕೊನಗವಳ್ಳಿ ಹಾರನಹಳ್ಳಿ – ಕುಂಸಿ (ರಾತ್ರಿ 9.39ಕ್ಕೆ) – ಅರಸಾಳು (ರಾತ್ರಿ 9.54ಕ್ಕೆ) – ಕೆಂಚನಾಳು – ಆನಂದಪುರ (ರಾತ್ರಿ 10.14ಕ್ಕೆ) – ಅಡ್ಡೇರಿ – ಸಾಗರ (SAGARA JAMBAGARU) ಜಂಬಗಾರು (ರಾತ್ರಿ 10.44ಕ್ಕೆ) ತಾಳಗುಪ್ಪ ರಾತ್ರಿ 11.30ಕ್ಕೆ ತಲುಪಲಿದೆ.

  • ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಡುವ ರೈಲು ಮಧ್ಯಾಹ್ನ 3.35ಕ್ಕೆ ಮೈಸೂರು ತಲುಪಲಿದೆ.

ಸಾಗರ ಜಂಬಾರು (ಬೆಳಗ್ಗೆ 6.34ಕ್ಕೆ ತಲುಪಲಿದೆ) – ಅಡ್ಡೇರಿ – ಆನಂದಪುರ (ಬೆಳಗ್ಗೆ 7.06ಕ್ಕೆ) – ಕೆಂಚನಾಳು – ಅರಸಾಳು ಕುಂಸಿ – ಹಾರನಹಳ್ಳಿ – ಕೊನಗವಳ್ಳಿ – ಶಿವಮೊಗ್ಗ ರೈಲ್ವೆ ನಿಲ್ದಾಣ (8.15ಕ್ಕೆ ತಲುಪಲಿದೆ) – ಶಿವಮೊಗ್ಗ ವಿದ್ಯಾನಗರ (ಬೆಳಗ್ಗೆ 8.25ಕ್ಕೆ) – ಭದ್ರಾವತಿ (ಬೆಳಗ್ಗೆ 8.43ಕ್ಕೆ)

ಮೊಸರಹಳ್ಳಿ – ತರೀಕರೆ (ಬೆಳಗ್ಗೆ 9.13ಕ್ಕೆ) – ಕಾರಣಹಳ್ಳಿ – ಶಿವಪುರ – ಬೀರೂರು (10.03ಕ್ಕೆ) – ಕಡೂರು (10.15ಕ್ಕೆ) – ಬಳ್ಳೆಕರೆ – ದೇವನೂರು – ಬಾಣವರ – ಅರಸೀಕರೆ (11.15ಕ್ಕೆ) – ಹಬನಘಟ್ಟ – ಬಾಗೇಶಪುರ – ಹಾಸನ (ಮದ್ಯಾಹ್ನ 12.28ಕ್ಕೆ) – ಮಾವಿನಕೆರೆ – ಹೊಳೆ ನರಸೀಪುರ (ಮದ್ಯಾಹ್ನ 1.08ಕ್ಕೆ) – ಮಂಡಗೆರೆ – ಬೀರಹಳ್ಳಿ – ಅಕ್ಕಿಹೆಬ್ಬಾಳು – ಹೊಸ ಅಗ್ರಹಾರ ಕೃಷ್ಣರಾಜನಗರ – ಸಾಗರಕಟ್ಟೆ – ಬೆಳಗುಳ – ಮೈಸೂರು ಮದ್ಯಾಹ್ನ 3.35ಕ್ಕೆ ತಲುಪಲಿದೆ.

ಎಷ್ಟು ಬೋಗಿ ಇರಲಿದೆ?

ವಿಶೇಷ ರೈಲಿನಲ್ಲಿ 12 ಬೋಗಿಗಳು ಇರಲಿವೆ. ರೈಲಿನಲ್ಲಿ ಹತ್ತು ಸಕೆಂಡ್ ಕ್ಲಾಸ್ ಜನರಲ್ ಕೋಚ್ ಬೋಗಿ ಇರಲಿದೆ. ಎರಡು ಸಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿದೆ.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment