ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 31 ಡಿಸೆಂಬರ್ 2019
ಹೊಸ ವರ್ಷದ ಸ್ವಾಗತಕ್ಕೆ ಶಿವಮೊಗ್ಗದಲ್ಲಿ ಜನರು ಕಾತುರವಾಗಿದ್ದಾರೆ. ವಿವಿಧೆಡೆ ಹೊಟೇಲ್, ಕ್ಲಬ್ಬುಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ಶಿವಮೊಗ್ಗದ ಪ್ರಮುಖ ಹೊಟೇಲ್’ಗಳಲ್ಲಿ ನ್ಯೂ ಇಯರ್ ಸೆಲಬ್ರೇಷನ್ ನಡೆಯುತ್ತಿದೆ. ಇನ್ನು, ಕ್ಲಬ್’ಗಳಲ್ಲೂ ಪಾರ್ಟಿಗಳನ್ನು ಅರೇಂಜ್ ಮಾಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಸೆಲಬ್ರಿಟಿ ಶೋ
ಹೊಸ ವರ್ಷದ ಸ್ವಾಗತಕ್ಕೆ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸೆಲಬ್ರಿಟಿ ಷೋ ಆಯೋಜಿಸಲಾಗಿದೆ. ನಿದಿಗೆ ಕೆರೆ ಅಂಗಳದಲ್ಲಿರುವ ಚುಂಚಾದ್ರಿ ವಾಟರ್ ಸ್ಪೋರ್ಟ್ಸ್ ಲೇಕ್ ವ್ಯೂ ರೆಸ್ಟೋರೆಂಟ್’ನಲ್ಲಿ ಹೊಸ ವರ್ಷಾಚರಣೆಯ ಸೆಲಬ್ರೇಷನ್ ಆಯೋಜಿಸಲಾಗಿದೆ. ನಟರಾದ ಅಪ್ಪಣ್ಣ, ನಯನಾ, ಗಾಯಕರಾದ ಸುಹಾನಾ ಸಯ್ಯದ್, ಸುನಿಲ್ ಸೇರಿದಂತೆ ಹಲವು ಸೆಲಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ನೀವು ಭಾಗವಹಿಸಬೇಕಿದ್ದರೆ 6362690851, 7760119075, 9663121993, 7019659388 ಸಂಪರ್ಕಿಸಬಹುದು.
ಎಲ್ಲೆಲ್ಲು ಬಿಗಿ ಪೊಲೀಸ್ ಬಂದೋಬಸ್ತ್
ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ತಿಳಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು ಅನ್ನುವುದನ್ನು ಕೇಳಲು ಕ್ಲಿಕ್ ಮಾಡಿ, ವಿಡಿಯೋ ನೋಡಿ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Welcoming New year 2020. Preparations were on in various hotels and clubs. Shivamogga Live Report.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422