ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಜನವರಿ 2022
ಹೊಸ ವರ್ಷದ ಮೊದಲ ದಿನವಾದ್ದರಿಂದ ಶಿವಮೊಗ್ಗದ ದೇವಸ್ಥಾನಗಳು, ಚರ್ಚುಗಳಿಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಈ ವರ್ಷ ದೇಶದಲ್ಲಿ ನೆಮ್ಮದಿ ನೆಲಸಲಿ, ಕರೋನ ದೂರವಾಗಲಿ ಎಂದು ಎಲ್ಲರೂ ದೇವರಲ್ಲಿ ಬೇಡಿಕೊಂಡರು.
ಪ್ರತಿ ಶನಿವಾರ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹೊಸ ವರ್ಷದ ಮೊದಲ ದಿನವಾದ್ದರಿಂದ ಇವತ್ತು ಭಕ್ತರ ಸಂಖ್ಯೆಯಲ್ಲಿ ತುಸು ಹೆಚ್ಚಿತ್ತು. ಕೋಟೆ ಭೀಮೇಶ್ವರ ದೇವಸ್ಥಾನ, ಕೋಟೆ ಮಾರಿಕಾಂಬ ದೇಗುಲಗಳಲ್ಲೂ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.
ಬಹುತೇಕರು ಕುಟುಂಬ ಸಹಿತವಾಗಿ ಬಂದು ದೇವರಿಗೆ ಪೂಜೆ ಸಲ್ಲಿಸಿ, ಹಣ್ಣು, ಕಾಯಿ ಮಾಡಿಸಿ, ಭಕ್ತಿಯಿಂದ ಬೇಡಿಕೊಂಡರು. ಶಿವಮೊಗ್ಗ ನಗರದ ಬಹುತೇಕ ಎಲ್ಲಾ ದೇಗುಲಗಳಲ್ಲೂ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.
ಇನ್ನು, ನಗರ ಪ್ರಮುಖ ಚರ್ಚ್’ಗಳು, ಪ್ರಾರ್ಥನಾ ಮಂದಿರಗಳಿಗೆ ಭಕ್ತರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ನೈಟ್ ಕರ್ಫ್ಯೂ ನಡುವೆಯು ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422