ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MAY 2021
ಶಿವಮೊಗ್ಗದಲ್ಲಿ ನವವಿವಾಹಿತೆ ಕರೋನಾಗೆ ಬಲಿಯಾಗಿದ್ದಾರೆ. ಮದುವೆಯಾಗಿ ನಾಲ್ಕೆ ದಿನಕ್ಕೆ ಸೋಂಕು ಉಲ್ಬಣಗೊಂಡು ಕೊನೆಯುಸಿರೆಳೆದಿದ್ದಾರೆ.
ಮಲವಗೊಪ್ಪದ ಪೂಜಾ, ಮೃತ ನವ ವಿವಾಹಿತೆ. ಮೇ.24ರಂದು ಹರಿಗೆ ನಿವಾಸಿ ಮಹೇಶ್ ಎಂಬುವವರೊಂದಿಗೆ ಪೂಜಾ ವಿವಾಹವಾಗಿತ್ತು.
ಮದುವೆಯಾದ ಮರುದಿನವೆ ಪೂಜಾಗೆ ಜ್ವರ ಬಂದಿತ್ತು. ಸ್ಥಳೀಯ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇವತ್ತು ಜ್ವರ ಜಾಸ್ತಿಯಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯದಲ್ಲೇ ಪೂಜಾ ಕೊನೆಯುಸಿರೆಳೆದಿದ್ದಾರೆ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]