ಶಿವಮೊಗ್ಗದಲ್ಲಿ ನಟಿ ಅದಿತಿ ಪ್ರಭುದೇವ್‌, ಗೋಪಾಳದಲ್ಲಿ ಸೂಪರ್‌ ಸ್ಪೆಷಾಲಿಟಿ ಕ್ಲಿನಿಕ್‌ಗೆ ಚಾಲನೆ, ಏನೇನಿದೆ ಕ್ಲಿನಿಕ್‌ನಲ್ಲಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ನಗರದ ಗೋಪಾಳದಲ್ಲಿ ನಾರಾಯಣ ಹೆಲ್ತ್‌ನ ಎರಡನೇ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ಗೆ ಇಂದು ಚಾಲನೆ ದೊರೆಯಿತು. ಚಲನಚಿತ್ರ ನಟಿ ಅದಿತಿ ಪ್ರಭುದೇವ ಕ್ಲಿನಿಕ್ ಉದ್ಘಾಟಿಸಿದರು.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಬಳಿಕ ಮಾತನಾಡಿದ ಅದಿತಿ ಪ್ರಭುದೇವ, “ನಾರಾಯಣ ಸಂಸ್ಥೆ ರಾಜ್ಯದಾದ್ಯಂತ ಜನರ ವಿಶ್ವಾಸ ಗಳಿಸಿರುವ ಆರೋಗ್ಯ ಸಂಸ್ಥೆಯಾಗಿದೆ. ಶಿವಮೊಗ್ಗದಲ್ಲಿ ಮತ್ತೊಂದು ಕ್ಲಿನಿಕ್ ಆರಂಭಿಸಿರುವುದು ಸಂಸ್ಥೆಯ ಮೇಲಿನ ಜನರ ನಂಬಿಕೆಗೆ ಸಾಕ್ಷಿ. ಯಾವುದೇ ಸಂಕಷ್ಟದ ಸಂದರ್ಭದಲ್ಲೂ ವೈದ್ಯರು ತಮ್ಮ ಕುಟುಂಬಕ್ಕಿಂತ ಸೇವೆಗೆ ಆದ್ಯತೆ ನೀಡುತ್ತಾರೆ” ಎಂದು ಶ್ಲಾಘಿಸಿದರು.

Actress-Adithi-Prabhudev-inaugurates-NH-Hospital-Clinic-in-Shimoga

ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ್ ಶರ್ಮಾ ಮಾತನಾಡಿ, “ಗೋಪಾಳ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಸುಲಭವಾಗಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕ್ಲಿನಿಕ್ ಆರಂಭಿಸಲಾಗಿದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ನಾಗರಿಕರಿಗಾಗಿ ₹1,999ಕ್ಕೆ ಸಮಗ್ರ ಆರೋಗ್ಯ ತಪಾಸಣಾ ಪ್ಯಾಕೇಜ್ ಘೋಷಿಸಲಾಗಿದೆ” ಎಂದು ತಿಳಿಸಿದರು.

ಕ್ಲಿನಿಕ್‌ನಲ್ಲಿ ಏನೇನೆಲ್ಲ ಲಭ್ಯವಿದೆ?

ನಾರಾಯಣ ಹೆಲ್ತ್‌ ನೂತನ ಕ್ಲಿನಿಕ್‌ನಲ್ಲಿ ಎಕ್ಸ್-ರೇ, ಎಕೋ, ಟಿಎಂಟಿ, ರಕ್ತ ಪರೀಕ್ಷೆ ಮಾದರಿ ಸಂಗ್ರಹ, ಫಾರ್ಮಸಿ, ಫಿಸಿಯೋಥೆರಪಿ ಹಾಗೂ ತಜ್ಞ ವೈದ್ಯರ ಸಲಹೆ ಸೇವೆಗಳು ಒಂದೇ ಸೂರಿನಡಿ ಲಭ್ಯವಿವೆ.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಎನ್.ಎಲ್. ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ. ಚೇತನ್ ಎಂ.ಎಲ್, ಸಂತ ಕುಮಾರ, ಶೈಲೇಶ್ ಎಸ್.ಎನ್ ಉಪಸ್ಥಿತರಿದ್ದರು.