ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಿಂದಾಗಿ ಸಾಹಿತ್ಯ ಗ್ರಾಮ ಕಳೆ ಕಟ್ಟಿದೆ. 15ನೇ ಜಿಲ್ಲಾ ಸಹಿತ್ಯ ಸಮ್ಮೇಳನದ ಮೊದಲ ದಿನ ಸಾಹಿತ್ಯ ಆಸಕ್ತರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ ಸಮ್ಮೇಳನದ ಆಕರ್ಷಣೆಯಾಗಬೇಕಿದ್ದ ಪುಸ್ತಕ ಮಳಿಗೆಗಳ ಸಂಖ್ಯೆ ಮಾತ್ರ ಒಂದಕ್ಕೆ ಸೀಮಿತವಾಗಿತ್ತು.
ಖಾದಿ ಬಟ್ಟೆಗಳದ್ದೆ ಕಾರುಬಾರು
ಸಾಹಿತ್ಯ ಗ್ರಾಮದಲ್ಲಿ ಪುಸ್ತಕ ಮಳಿಗೆಗಳಿಗಿಂತಲೂ ಖಾದಿ ಬಟ್ಟೆ ಮಾರಾಟದ ಅಬ್ಬರ ಜೋರಾಗಿತ್ತು. ಮಳಿಗೆಗಳ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಸಮ್ಮೇಳನದ ಅಧ್ಯಕ್ಷರ ಅದ್ಧೂರಿ ಮೆರವಣಿಗೆ
ಸಾಹಿತ್ಯ ಆಸಕ್ತರನ್ನು ಸೆಳೆಯದ ಬೆರಳೆಣಿಕೆ ಪುಸ್ತಕ
ಇರುವುದು ಒಂದೆ ಪುಸ್ತಕ ಮಳಿಗೆ. ಇದು ಕೂಡ ಸಾಹಿತ್ಯ ಆಸಕ್ತರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಇಲ್ಲಿರುವ ಬೆರಳೆಣಿಕೆ ಪುಸ್ತಕಗಳು ಓದುಗರ ಆಸಕ್ತಿ ಕೆರಳಿಸದ ಹಿನ್ನೆಲೆ ಪುಸ್ತಕ ಮಳಿಗೆಗಳ ಬಳಿಗೆ ಸಾಹಿತ್ಯ ಪ್ರೇಮಿಗಳು ಸುಳಿಯಲಿಲ್ಲ.
ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಒತ್ತು ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- Bus falls off bridge near Bhadravathi, 30 injured

- ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್, ಹೇಗಾಯ್ತು ಘಟನೆ?

- BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

- ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

- ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಸಂಘದ ಸಾಲದ ಹೆಸರಲ್ಲಿ ನಡೆಯಿತು ಮಹಾ ವಂಚನೆ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು














