ಶಿವಮೊಗ್ಗ ನಗರದಲ್ಲಿ ಒಂದು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ ಸಾಧ್ಯತೆ

SHIVAMOGGA LIVE | 9 JULY 2023

SHIMOGA : ನಗರದಾದ್ಯಂತ ಜು.10ರಂದು ಕುಡಿಯುವ ನೀರು (Drinking Water) ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತುರ್ತು ನಿರ್ವಹಣೆ ಮತ್ತು ಸ್ಮಾರ್ಟ್‌ ಸಿಟಿ ಕಾಮಗಾರಿ ಹಿನ್ನೆಲೆ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಿದೆ. ಆದ್ದರಿಂದ ಜು.10ರಂದು ನಗರದಲ್ಲಿ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕರು ಸಹಕರಿಸುವಂತೆ ಮಂಡಳಿಯ ನಿರ್ವಹಣೆ ಮತ್ತು ಪಾಲನೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ಮಲೇಷಿಯಾ, ಸೇಲಂಗಿಂತಲು ಶಿವಮೊಗ್ಗದಲ್ಲಿ ಅತಿ ಎತ್ತರದ ಪ್ರತಿಮೆ, ಹೇಗಿರುತ್ತೆ? ಇಲ್ಲಿದೆ 7 ಪ್ರಮುಖ ವಿಶೇಷತೆ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment