ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020
ಕರೋನ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಅಂತಾ ಸರ್ಕಾರ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮಾಸ್ಕ್ ಧರಿಸದೆ ಓಡಾಡುವವರ ವಿರುದ್ಧ ಮಹಾನಗರ ಪಾಲಿಕೆ ದಂಡ ವಿಧಿಸುತ್ತಿದೆ. ಮತ್ತೊಂದೆಡೆ ದಂಡ ವಿಧಿಸುವ ಸಂದರ್ಭ ಪಾಲಿಕೆ ಅಧಿಕಾರಿಗಳ ವರ್ತನೆಗೆ ಆಕ್ಷೇಪವು ವ್ಯಕ್ತವಾಗಿದೆ.
ಒಂದು ಲಕ್ಷ ರೂ. ದಂಡ
ಮಾಸ್ಕ್ ಕಡ್ಡಾಯಗೊಳಿಸಿದ ಬಳಿಕ ಒಂದೇ ತಿಂಗಳಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಒಂದು ಲಕ್ಷ ರುಪಾಯಿಗೂ ಅಧಿಕ ಮೊತ್ತದ ದಂಡ ವಿಧಿಸಿದ್ದಾರೆ. 1,33,600 ರೂ. ದಂಡದ ಹಣ ಸಂಗ್ರಹ ಮಾಡಲಾಗಿದೆ.
ಉಗುಳಿದ್ದಕ್ಕೆ, ಅಂತರ ಇಲ್ಲದ್ದಕ್ಕೂ ದಂಡ
ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು, ತಂಬಾಕು ಪದಾರ್ಥ ಜಗಿದು ರಸ್ತೆ ಮೇಲೆ ಉಗುಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದಕ್ಕೂ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಉಗುಳಿದ್ದಕ್ಕೆ ಇಬ್ಬರಿಗೆ ತಲಾ ಸಾವಿರ ರೂ., ತಂಬಾಕು ಪದಾರ್ಥ ಜಗಿದು ರಸ್ತೆ ಮೇಲೆ ಉಗುಳಿದ ಮೂವರಿಗೆ ತಲಾ 1500ರೂ. ದಂಡ ವಿಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದಕ್ಕೆ 321 ಮಂದಿಗೆ ದಂಡ ಹಾಕಲಾಗಿದೆ.

ಅಧಿಕಾರಿಗಳ ವರ್ತನೆಗೆ ಆಕ್ರೋಶ
ಸಾರ್ವಜನಿಕ ಸ್ಥಳದಲ್ಲಿ ಉಗುಳುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿರುವುದು ಜನ ಮೆಚ್ಚುಗೆ ಗಳಿಸಿದೆ. ಈ ಕೆಲಸ ನಿರಂತರವಾಗಿ ಮುಂದುವರೆಯಬೇಕು. ಎಲ್ಲೆಂದರಲ್ಲಿ ಉಗಿಯುವವರಿಗೆ ಇನ್ನಷ್ಟು ಬಿಸಿ ಮುಟ್ಟಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದರೆ ಮಾಸ್ಕ್ ಧರಿಸದೆ ಇರುವವರ ವಿರುದ್ಧ ದಂಡ ಹಾಕುವ ಸಂದರ್ಭ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಸಿಬ್ಬಂದಿ ವಿರುದ್ಧ ಡಿಸಿಗೆ ದೂರು
ಪಾಲಿಕೆ ಸಿಬ್ಬಂದಿಗಳು ಮಾಸ್ಕ್ ಧರಿಸದ ಸಾರ್ವಜನಿಕರಿಂದ ದಂಡ ವಸೂಲಿಯನ್ನಷ್ಟೇ ಮುಖ್ಯವಾಗಿರಿಸಿಕೊಂಡಿದ್ದು, ಕರೋನ ಕುರಿತು ತಿಳಿವಳಿಕೆ ಮೂಡಿಸುತ್ತಿಲ್ಲ. ದಂಡ ಕಟ್ಟಲು ಹಣವಿಲ್ಲ ಎಂದರೆ ಪೊಲೀಸರನ್ನು ಕರೆಯಿಸುತ್ತೇವೆ, ವಾಹನ ಸವಾರರಾಗಿದ್ದರೆ ಟೈಗರ್ ವಾಹನ ಕರೆಸುತ್ತೇವೆ ಎಂದು ಬೆದರಿಸಿ, ನಿಂದಿಸುತ್ತಿದ್ದಾರೆ ಎಂದು ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಆರೋಪ ಮಾಡಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದೆ.
ಅಧಿಕಾರಿಗಳು 200 ರೂ. ದಂಡ ವಸೂಲಿ ಮಾಡುವುದೆ ಗುರಿ ಅಂದುಕೊಂಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಿ, 20 ರೂ. ಒಂದು ಮಾಸ್ಕ್ ಕೊಟ್ಟರೆ ಅನುಕೂಲ. ಸುಮ್ಮನೆ ಪೊಲೀಸರಿಗೂ ದಂಡ ಹಾಕಿದ್ದೀವಿ, ತಹಶೀಲ್ದಾರ್‌ಗೂ ದಂಡ ಹಾಕಿದ್ದೇವೆ ಎಂದು ಜನರನ್ನು ಹೆದರಿಸುತ್ತಿದ್ದಾರೆ ಎಂದು ಸಂಘಟನೆ ಮುಖಂಡ ರಿಯಾಜ್ ಅಹಮದ್ ಆರೋಪಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200