SHIVAMOGGA LIVE NEWS | 5 SEPTEMBER 2023
SHIMOGA : ಬಿ.ಹೆಚ್.ರಸ್ತೆಯಲ್ಲಿ ವಾಃನ ದಟ್ಟಣೆ ನಿಯಂತ್ರಣಕ್ಕಾಗ ನೋ ಪಾರ್ಕಿಂಗ್ (No Parking) ಸ್ಥಳವನ್ನು ಗುರುತಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಿಂದ ಬಾಪೂಜಿನಗರ – ಟ್ಯಾಂಕ್ ಮೊಹಲ್ಲಾ ಕಡೆಗೆ ಕೆಲವು ಕಡೆ ನೋ ಪಾರ್ಕಿಂಗ್, ಇನ್ನು ಕೆಲವೆಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.
ಕಾರಣವೇನು?
ಈ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜು ಇದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಓಡಾಟ ಇರುತ್ತದೆ. ಜಿಲ್ಲಾಡಳಿತದಿಂದ ನಡೆಯುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳ ಮೆರವಣಿಗೆ ನಡೆಯಲಿದೆ. ಆದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರ ಎಚ್ಚರ, ಇನ್ಮುಂದೆ ಕಂಡಲ್ಲೆಲ್ಲ ಪಾರ್ಕಿಂಗ್ ಮಾಡುವಂತಿಲ್ಲ, ಕಾರಣವೇನು?
ಎಲ್ಲಿ ನೋ ಪಾರ್ಕಿಂಗ್? ಎಲ್ಲಿ ಪಾರ್ಕಿಂಗ್ ಇದೆ?
ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್) : ಬಿ.ಹೆಚ್.ರಸ್ತೆಯಿಂದ ಬಾಪೂಜಿ ನಗರ – ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ (ಮೀನಾಕ್ಷಿಭವನದ ಎದುರುಗಡೆ) ಬಿ.ಹೆಚ್.ರಸ್ತೆಯ ಕಡೆಯಿಂದ ಬಲಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್ ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.
ಇದನ್ನೂ ಓದಿ – ಇನ್ಮುಂದೆ ಎಲ್ಲೆಂದರಲ್ಲಿ ಸಿಟಿ ಬಸ್ ನಿಲ್ಲಿಸುವಂತಿಲ್ಲ, ಶಿವಮೊಗ್ಗದಲ್ಲಿ 117 ಬಸ್ ಸ್ಟಾಪ್ ಗುರುತಿಸಿ ಅಧಿಸೂಚನೆ ಪ್ರಕಟ
ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್): ಬಿ.ಹೆಚ್.ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್‍ಗೆ ಹೊಂದಿಕೊಂಡಂತೆ (ಮೀನಾಕ್ಷಿಭವನದ ಎದುರುಗಡೆ) ಬಿ.ಹೆಚ್.ರಸ್ತೆಯ ಕಡೆಯಿಂದ ಎಡಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್‍ವರೆಗೆ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೇಟ್‍ವರೆಗೆ) ದ್ವಿಚಕ್ರ ಹಾಗೂ ಕಾರು ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿದ್ದಾರೆ.
ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200