ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MAY 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯ ಬೆನ್ನಿಗೆ ಶಿವಮೊಗ್ಗದಲ್ಲಿ ಇವತ್ತಿನ ಕರ್ಪ್ಯೂ ಬ್ಯಾರಿಕೇಡ್ಗೆ ಸೀಮಿತವಾಗಿದೆ. ಈ ನಡುವೆ ಜನರು ಕೂಡ ಮನೆಯಿಂದ ಹೊರ ಬಾರದೆ ಇರುವುದರಿಂದ ರಸ್ತೆಗಳು ಖಾಲಿ ಖಾಲಿ ಅನಿಸುತ್ತಿವೆ.
ಶಿವಮೊಗ್ಗ ನಗರದಾದ್ಯಂತ ಪೊಲೀಸರ ಸಂಖ್ಯೆ ಸಂಪೂರ್ಣ ತಗ್ಗಿದೆ. ನಗರದ ಪ್ರಮುಖ ಕಡೆಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಪೊಲೀಸ್ ಸಿಬ್ಬಂದಿ ಕಾಣಸಿಗುತ್ತಾರೆ. ಶನಿವಾರ ಇದ್ದಷ್ಟು ಪೊಲೀಸ್ ಸಿಬ್ಬಂದಿಯಾಗಲಿ, ಕಟ್ಟೆಚ್ಚರವಾಗಲಿ ಇಲ್ಲ.

ಎಲ್ಲೆಲ್ಲೂ ಬ್ಯಾರಿಕೇಡ್
ನಗರದಾದ್ಯಂತ ಬ್ಯಾರಿಕೇಡ್ಗಳನ್ನ ಹಾಕಲಾಗಿದೆ. ಗಾಂಧಿ ಬಜಾರ್, ಶಿವಪ್ಪನಾಯಕ ಪ್ರತಿಮೆ, ಅಮೀರ್ ಅಹಮದ್ ಸರ್ಕಲ್, ನೆಹರೂ ರೋಡ್, ಅಶೋಕ ಸರ್ಕಲ್, ಸಾಗರ ರಸ್ತೆ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್ ಹಾಕಲಾಗಿದೆ. ವಾಹನಗಳ ಸಂಚಾರ ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ರಸ್ತೆಯಲ್ಲಿ ಜನರಿಲ್ಲ, ವಾಹನ ವಿರಳ
ಭಾನುವಾರವಾದ್ದರಿಂದ ಶಿವಮೊಗ್ಗದಲ್ಲಿ ಇವತ್ತು ಜನ ಸಂಚಾರ ಸಂಪೂರ್ಣ ತಗ್ಗಿದೆ. ವಾಹನಗಳ ಸಂಖ್ಯೆಯು ಕಡಿಮೆ ಇದೆ. ಬಿಗಿ ಬಂದೋಬಸ್ತ್ ಇಲ್ಲದಿದ್ದರೂ ವಾಹನ ಸಂಚಾರವಿಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿವೆ.
ನೀವಿನ್ನೂ ಕರೋನ ಲಸಿಕೆ ಪಡೆದಿಲ್ಲವಾ? ಕೂಡಲೆ ಕೆಳಗಿರುವ ಫೋಟದಲ್ಲಿನ ನಂಬರ್ಗೆ ಕರೆ ಮಾಡಿ, ಸುರಕ್ಷಿತವಾಗಿ ಲಸಿಕೆ ಪಡೆಯಿರಿ

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

- MRPಗಿಂತಲು ಹೆಚ್ಚು ವಸೂಲಿ, ಫ್ಲಿಪ್ಕಾರ್ಟ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ

About The Editor
ನಿತಿನ್ ಆರ್.ಕೈದೊಟ್ಲು






