ಮೇಲ್ಗಡೆ ಸಚಿವರ ಸಭೆ, ಕೆಳಗೆ ಕರೆಂಟ್ ಇಲ್ಲದೆ ನೆಲದ ಮೇಲೆ ಕುಳಿತ ಜನ, ಶಿವಮೊಗ್ಗದಲ್ಲಿ ಇದೆಂಥಾ ಅವಸ್ಥೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIVAMOGGA LIVE NEWS | 3 JANUARY 2023

SHIMOGA : ಕಟ್ಟಡದ ಮೇಲ್ಭಾಗದಲ್ಲಿ ಸಚಿವರು, ಹಿರಿಯ ಅಧಿಕಾರಿಗಳ ಸಭೆ. ಕೆಳಗೆ ಅರ್ಜಿ ಸಲ್ಲಿಸಲು ಕಾದು ಕಾದು ಹೈರಾಣಾಗಿ ನೆಲದ ಮೇಲೆ ಕುಳಿತ ಜನ. ಇದು ಶಿವಮೊಗ್ಗ ತಾಲೂಕು ಕಚೇರಿಯಲ್ಲಿನ ದುಸ್ಥಿತಿ.

ತಾಲೂಕು ಕಚೇರಿ ಕಟ್ಟಡದಲ್ಲಿರುವ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಯುವನಿಧಿ ಯೋಜನೆ ಚಾಲನೆ ಸಂಬಂಧ ಸಭೆ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವ ಶರಣ ಪ್ರಕಾಶ್ ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದೆ ಸಭಾಂಗಣದ ಕೆಳ ಮಹಡಿಗಳಲ್ಲಿ ವಿದ್ಯುತ್ ಕಡಿತವಾಗಿದೆ.

ನೆಲದ ಮೇಲೆ ಕುಳಿತ ಜನ

ಸಭಾಂಗಣದಲ್ಲಿ ಲೈಟು, ಮೈಕುಗಳೆಲ್ಲವು ಕಾರ್ಯನಿರ್ವಹಿಸುತ್ತಿವೆ. ಆದರೆ ಇದೆ ಕಟ್ಟಡದ ಕೆಳ ಮಹಡಿಗಳಲ್ಲಿರುವ ಕಚೇರಿಗಳಲ್ಲಿ ವಿದ್ಯುತ್ ಕಡಿತವಾಗಿದೆ. ಕಚೇರಿಯಲ್ಲಿ ತುರ್ತು ಅಗತ್ಯವಿರುವೆಡೆ ಮಾತ್ರ ಲೈಟ್, ಕಂಪ್ಯೂಟರ್ ಬಳಸಲಾಗುತ್ತಿದೆ. ಉಳಿದೆಡೆ ಲೈಟ್, ಕಂಪ್ಯೂಟರ್‌ಗಳನ್ನು ಬಂದ್ ಮಾಡಲಾಗಿದೆ.
ವಿವಿಧ ಯೋಜನೆಗಳು, ಕೆಲಸ ಕಾರ್ಯಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದವರು ಕಾದು ಕೂತಿದ್ದಾರೆ. 11.30ರವರೆಗೆ ಕಾಯುವಂತೆ ಜನರಿಗೆ ಸಿಬ್ಬಂದಿ ತಿಳಿಸುತ್ತಿದ್ದರು.

ಇದನ್ನೂ ಓದಿ – ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ, ಆನಂದಪುರ, ರಿಪ್ಪನ್‌ಪೇಟೆಯಲ್ಲಿ ಮೆರವಣಿಗೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 3, 2024

Leave a Comment