ಮಹಾವೀರ ವೃತ್ತದಿಂದ ಬಸವೇಶ್ವರ ಸರ್ಕಲ್‌ಗೆ ತೆರಳುವ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಶಾಲೆ, ಕಾಲೇಜು, ಕಚೇರಿಗಳಿಗೆ ತರಳುವವರಿಗೆ ಸಮಸ್ಯೆಯಾಗಿತ್ತು.
ATNC ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕರು, ಉಪನ್ಯಾಸಕರು ತುಂಡಾಗಿ ಬಿದ್ದಿದ್ದ ಮರದ ರೆಂಬೆ ತೆರವು ಮಾಡಿದ್ದಾರೆ. ಸದ್ಯ ಈ ರಸ್ತೆಯಲ್ಲಿ ವಾಹನ ಸಂಚಾರ ಪುನಾರಂಭವಾಗಿದೆ. ATNC ಕಾಲೇಜು ಎನ್‌ಎಸ್‌ಎಸ್ ಸ್ವಯಂ ಸೇವಕರ ಕಾರ್ಯ ಜನರ ಮೆಚ್ಚುಗೆ ಗಳಿಸಿತು.
ATNC ಕಾಲೇಜು ಪ್ರಾಂಶುಪಾಲರಾದ ಮಮತಾ.ಪಿ.ಆರ್, ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಧಿಕಾರಿಗಳಾದ ಮಂಜುನಾಥ್ ಎನ್, ಪ್ರವೀಣ್.ಬಿ.ಎನ್, ಗಾಯತ್ರಿ.ಟಿ, ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಲಲಿತಾ.ಎಂ.ಕೆ, ಉರ್ದು ವಿಭಾಗದ ಮುಖ್ಯಸ್ಥ ಸಮಿವುಲ್ಲ, ಎನ್‌ಎಸ್‌ಎಸ್ ಸ್ವಯಂ ಸೇವಕರು ಇದ್ದರು.



ಇದನ್ನೂ ಓದಿ » ‘ನಿಶ್ಯಬ್ದ ಹಂತಕʼ ಮಧುಮೇಹ, ಶಿವಮೊಗ್ಗದಲ್ಲಿ ನಾಳೆ ಉಚಿತ ತಪಾಸಣೆ, ಅರಿವು, ಎಲ್ಲಿ? ಎಷ್ಟೊತ್ತಿಗೆ?