ಶಿವಮೊಗ್ಗ : ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ ಎನ್.ಯು ಆಸ್ಪತ್ರೆ ಈಗ ಶಿವಮೊಗ್ಗ ಕಿಡ್ನಿ (Kidney) ಆಸ್ಪತ್ರೆಯಾಗಿ ಮರುನಾಮಕರಣಗೊಂಡಿದೆ. ಕಿಡ್ನಿ ದಿನದ ಅಂಗವಾಗಿ ಇವತ್ತು ನೂತನ ಹೆಸರು ಅನಾವರಣ ಮಾಡಲಾಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯರು, ಮರುನಾಮಕರಣಕ್ಕೆ ಕಾರಣ ನೀಡಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ನವಜಾತ ಶಿಶುಗಳಿಂದ ಎಲ್ಲ ವಯೋಮಾನದವರಿಗೆ ಕಿಡ್ನಿ ಸಮಸ್ಯೆ ಆಗುತ್ತಿದೆ. ಡಯಾಬೆಟಿಕ್ ಕಿಡ್ನಿ ಸಮಸ್ಯೆ ಈಗ ಉಲ್ಬಣಗೊಂಡಿದೆ. ಜೀವನಶೈಲಿಯೆ ಇದಕ್ಕೆ ಮೂಲ ಕಾರಣ. ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಕಿಡ್ನಿ ಸಮಸ್ಯೆಯಿಂದ ಪಾರಾಗಬಹುದು. ಎನ್ಯು ಆಸ್ಪತ್ರೆ ಕಿಡ್ನಿ ಚಿಕಿತ್ಸೆಗೆ ಸೀಮಿತ. ಇದು ಹೆಚ್ಚು ಜನರಿಗೆ ತಲುಪಲಿ ಎಂಬ ಕಾರಣಕ್ಕೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗಿದೆ.
– ಡಾ. ಪ್ರದೀಪ್.ಎಂ.ಜಿ, ಯುರಾಲಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್ಪ್ಲಾಂಟ್ ಸರ್ಜನ್
ಮಧ್ಯ ಕರ್ನಾಟಕದಲ್ಲಿ ಎನ್.ಯು. ಆಸ್ಪತ್ರೆಯಲ್ಲಿ ಕಿಡ್ನಿಗೆ ಅತ್ಯುತ್ತಮ ಚಕಿತ್ಸೆ ನೀಡಲಾಗುತ್ತಿದೆ. ಇದು ಸಾಮಾನ್ಯ ಆಸ್ಪತ್ರೆಯಂತಲ್ಲ. ಈ ವಿಷಯವನ್ನು ಜನರಿಗೆ ಮನದಟ್ಟು ಮಾಡಲು ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂದು ಮರು ನಾಮಕರಣ ಮಾಡಲಾಗಿದೆ. ಇಲ್ಲಿ ಕಳೆದ ಐದು ವರ್ಷದಲ್ಲಿ 18 ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಲಾಗಿದೆ. ಕಿಡ್ನಿ ಆರೈಕೆಯಲ್ಲಿ ಸುಧಾರಿತ ಚಿಕಿತ್ಸೆಯನ್ನು ನೀಡುವ ಮೂಲಕ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ ಹೊಂದಿರುವ ರೋಗಿಗಳಿಗೂ ಹೊಸ ಭರವಸೆ ತುಂಬಿದೆ.
– ಡಾ. ಪ್ರವೀಣ್ ಮಾಳವದೆ, ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್

ಕಿಡ್ನಿ (Kidney) ಚಿಕಿತ್ಸೆಗೆ ಈ ಭಾಗದ ಜನರು ಮಣಿಪಾಲ, ಬೆಂಗಳೂರಿನ ವಿವಿಧ ಆಸ್ಪತ್ರೆಗೆ ತೆರಳುತ್ತಿದ್ದರು. ಎನ್.ಯು. ಆಸ್ಪತ್ರೆ ಸ್ಥಾಪನೆಯಾದಾಗಿನಿಂದ ಶಿವಮೊಗ್ಗದಲ್ಲಿಯೇ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಚಿಕಿತ್ಸೆ ದೊರೆಯುತ್ತಿದೆ. ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು (ಎನ್.ಯು ಆಸ್ಪತ್ರೆ) ರಕ್ತದ ಗುಂಪು ಹೊಂದಾಣಿಕೆಯಾಗದವರಿಗೂ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿದ ಮಲೆನಾಡು ಭಾಗದ ಮೊದಲ ಆಸ್ಪತ್ರೆಯಾಗಿದೆ. ಇನ್ನು ಹೆಚ್ಚಿನ ಜನರಿಗೆ ಸೇವೆ ವಿಸ್ತರಿಸಲು ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರಿವಳಿಕೆ ತಜ್ಞರಾದ ಡಾ. ಕಾರ್ತಿಕ್ ಎಸ್.ಎಲ್ ಮತ್ತು ಡಾ. ಆಕಾಶ್ ಜೆ.ಎಸ್ ಉಪಸ್ಥಿತರಿದ್ದರು.
ಇದನ್ನೂ ಓದಿ » ಮುಸ್ಲಿಮ್ ಬಜೆಟ್ ಆರೋಪಕ್ಕೆ ಮಧು ಬಂಗಾರಪ್ಪ ತಿರುಗೇಟು, ಏನಂದ್ರು? ಇಲ್ಲಿದೆ ನಾಲ್ಕು ಪಾಯಿಂಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200