ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್‌ ಸಂಗ್ರಹ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 30 SEPTEMBER 2024 : ಚೀನಾ ಬೆಳ್ಳುಳ್ಳಿ (garlic) ಮಾರಾಟದ ಶಂಕೆ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ಳುಳ್ಳಿ ಸ್ಯಾಂಪಲ್‌ಗಳನ್ನು ವಶಕ್ಕೆ ಪಡೆದು ಲ್ಯಾಬ್‌ಗೆ ಕಳುಹಿಸಲಾಗಿದೆ.

ಶಿವಮೊಗ್ಗ ಎಪಿಎಂಸಿ, ಗಾಂಧಿ ಬಜಾರ್‌, ಲಷ್ಕರ್‌ ಮೊಹಲ್ಲಾ ಕೆಲವು ಮಾರಾಟಗಾರರ ಮೇಲೆ ದಾಳಿ ನಡೆಸಿದ್ದಾರೆ. ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡುತ್ತಿರುವ ಶಂಕೆ ಮೇರೆಗೆ ಎಫ್‌ಎಸ್‌ಎಸ್‌ಎಐ ಅಧಿಕಾರಿ ಸದಾಶಿವ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

FSSAI-officials-raid-for-china-garlic-in-shimoga

ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಹಿನ್ನೆಲೆ ಕೇಂದ್ರ ಸರ್ಕಾರ ಚೀನಾ ಬೆಳ್ಳುಳ್ಳಿ ಮಾರಾಟವನ್ನು ಭಾರತದಲ್ಲಿ ನಿಷೇಧಿಸಿದೆ. ಹೀಗಿದ್ದೂ ದೇಶದ ವಿವಿಧೆಡೆ ಚೀನಾ ಬೆಳ್ಳುಳ್ಳಿ ಮಾರಾಟದ ಆರೋಪಗಳಿದ್ದವು. ಶಿವಮೊಗ್ಗದಲ್ಲಿಯು ಇದೇ ಶಂಕೆ ಮೇರೆಗೆ ದಾಳಿ ನಡೆಸಲಾಗಿದೆ. ಸದ್ಯ ಸಂಗ್ರಹಿಸಲಾಗಿರುವ ಸ್ಯಾಂಪಲ್‌ ಆನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬಳಿಕ ಸ್ಪಷ್ಟತೆ ಲಭಿಸಲಿದೆ.

ಇದನ್ನೂ ಓದಿ » ಕರ್ನಾಟಕ ಸಂಘ, ನೂತನ ಕಾರ್ಯಕಾರಿ ಸಮಿತಿಗೆ 15 ಮಂದಿ ಆಯ್ಕೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment