BREAKING NEWS – ವಿದ್ಯಾನಗರದ ಗೋಡೌನ್‌ ಮೇಲೆ ದಾಳಿ, ಪರಿಶೀಲನೆ ವೇಳೆ ದಂಗಾದ ಅಧಿಕಾರಿಗಳು

ಶಿವಮೊಗ್ಗ: ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ (food godown) ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಅವಧಿ ಮೀರಿದ ಭಾರಿ ಪ್ರಮಾಣದ ತಿಂಡಿ ತಿನಿಸು ಪತ್ತೆಯಾಗಿವೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ – ಶಿವಮೊಗ್ಗದ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷ ಲಕ್ಷ ಜನ, ಮೈಸೂರು ಸಿಲ್ಕ್‌ ಸೀರೆ ದಾಖಲೆ ಮಾರಾಟ

adc-AND-AC-RAID-ON-FOOD-GOWDOWN-AT-VIDYANAGARA-IN-SHIMOGA-CITY.

ಅಪರ ಜಿಲ್ಲಾಧಿಕಾರಿ ಅಭಿಷೇಕ್, ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಶಿವಮೊಗ್ಗದಲ್ಲಿ ಮಾರಾಟ ಮಾಡಲು ಬೆಂಗಳೂರಿನಿಂದ ತಂದಿದ್ದ ವಿವಿಧ ಆಹಾರ ಪದಾರ್ಥಗಳನ್ನು ಈ ಗೋಡೌನ್‌ನಲ್ಲಿ ದಾಸ್ತಾನು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

adc-AND-AC-RAID-ON-FOOD-GOWDOWN-AT-VIDYANAGARA-IN-SHIMOGA-CITY.

ಈ ಗೋಡೌನ್‌ನಲ್ಲಿ ಅವಧಿ ಮುಗಿದಿದ್ದರೂ ರಾಶಿ ರಾಶಿ ತಿಂಡಿ ಪ್ಯಾಕೆಟ್‌ಗಳನ್ನು ಸಂಗ್ರಹಿಸಿಡಲಾಗಿತ್ತು. ಇದನ್ನು ಕಂಡು ಅಧಿಕಾರಿಗಳ ತಂಡವೇ ಬೆಸ್ತು ಬಿದ್ದಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಎಲ್ಲಾ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ನಾಶಪಡಿಸಿದರು. ಗೋಡೌನ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Total-Readers-of-Shivamogga-Live

Leave a Comment