SHIMOGA | ಜೆಲ್ಲಿ ಲಾರಿಗಳು ಯದ್ವತದ್ವ ಓಡಾಡುತ್ತಿದ್ದ ರಸ್ತೆಯಲ್ಲಿ ಇವತ್ತು ಸಚಿವರು, ಅಧಿಕಾರಿಗಳ ಕಾರುಗಳದ್ದೇ ಕಾರುಬಾರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021

ಕಲ್ಲು ತುಂಬಿಕೊಂಡು ಯದ್ವತದ್ವ ಲಾರಿಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಇವತ್ತು ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರ ವಾಹನಗಳದ್ದೆ ದರ್ಬಾರು. ಅಬ್ಬಲಗೆರೆಯಿಂದ ಕಲ್ಲಗಂಗೂರು ರಸ್ತೆಯಲ್ಲಿ ಇವತ್ತು ಕಾರು, ಜೀಪುಗಳದ್ದೆ ಕಾರುಬಾರು.

ಕರೆದು, ಗೋಗರೆದರು ಬರುತ್ತಿರಲಿಲ್ಲ

ಅಕ್ರಮ ಕಲ್ಲುಗಣಿಗಾರಿಕೆ, ಡೈನಮೇಟ್ ಸ್ಫೋಟ, ಲಾರಿಗಳ ಓವರ್ ಸ್ಪೀಡ್‍ನಿಂದಾಗಿ ಕಲ್ಲಗಂಗೂರು, ಹುಣಸೋಡು, ಅಬ್ಬಲಗೆರೆ ಭಾಗದ ಜನರು ರೋಸಿ ಹೋಗಿದ್ದರು.  ಒಂದೆಡೆ ಲಾರಿಗಳಿಂದಾಗಿ ಅಪಘಾತ ಸಂಭವಿಸುತ್ತಿದ್ದರೆ, ಮತ್ತೊಂದೆಡೆ ಸ್ಪೋಟ, ಧೂಳಿನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದೆ ಕಾರಣಕ್ಕೆ ಹಲವು ಬಾರಿ ಅಕ್ರಮ ಗಣಿಗಾರಿಕೆ ವಿರುದ್ಧ ಮನವಿ ಸಲ್ಲಿಸಿದ್ದರು. ಆದರೂ ಪ್ರಯೋಜನ ಶೂನ್ಯ.

‘ ನಾವು ಎಷ್ಟು ಬಾರಿ ಮನವಿ ಕೊಟ್ಟರೂ, ಪ್ರತಿಭಟನೆಗಳನ್ನು ಮಾಡಿದರೂ ಯಾರೊಬ್ಬರು ಈ ಕಡೆ ಬರುತ್ತಿರಲಿಲ್ಲ. ಇವತ್ತು ಮಂತ್ರಿಗಳಿಂದ ಹಿಡಿದು ಎಲ್ಲಾ ಅಧಿಕಾರಿಗಳು ಬರುತ್ತಿದ್ದಾರೆ.’ ಎಂದು ಸ್ಥಳೀಯ ನಿವಾಸಿ ಪ್ರಭಾಕರ್ ಆರೋಪಿಸುತ್ತಾರೆ.

ಮೊದಲೆ ಕ್ರಮ ಕೈಗೊಂಡಿದ್ದರೆ

ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸಂಗತಿ ಹೊಸತೇನಲ್ಲ. ಸಚಿವರಿಂದ ಹಿಡಿದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರವರೆಗೆ, ಜಿಲ್ಲಾಧಿಕಾರಿಯಿಂದ ಹಿಡಿದು ಸ್ಥಳೀಯ ಪಿಡಿಒ ತನಕ ಎಲ್ಲರಿಗೂ ಗೊತ್ತಿದೆ. ಆದರೆ ರಾಜಕೀಯ ಒತ್ತಡಕ್ಕೆ  ಯಾರೊಬ್ಬರು ಕ್ರಮಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಮೊದಲೆ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತಿರಲಿಲ್ಲ. ಇನ್ನಾದರು ಅಕ್ರಮ ಗಣಿಗಾರಿಕೆಯಿಂದ ನಮಗೆ ಮುಕ್ತಿ ಸಿಗುವಂತಾಗಲಿ ಅಂತಾ ಗ್ರಾಮಸ್ಥರು ನೋವು ಹಂಚಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment