ಕಾರಿನ ಗಾಜು ಒಡೆದ ಕೇಸ್, ಒಬ್ಬ ಅರೆಸ್ಟ್, ಯಾರದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS
SHIVAMOGGA LIVE NEWS | ATTACK | 08 ಮೇ 2022
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದ ಸೂಳೆಬೈಲಿನಲ್ಲಿ ಕಳೆದ ರಾತ್ರಿ ಕಾರು ಗಾಜು ಒಡೆದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಅವರು ಹೇಳಿದ್ದೇನು?

ಬೆಂಗಳೂರಿನ ನಿವಾಸಿಯೊಬ್ಬರು ಶಿವಮೊಗ್ಗದ ಮತ್ತೂರಿನಲ್ಲಿರುವ ತಮ್ಮ ಸಂಬಂಧಿಯ ಮನೆಗೆ ಆಗಮಿಸಿದ್ದರು. ಕಾರಿನಲ್ಲಿ ಅವರೊಂದಿಗೆ ಸ್ಥಳೀಯರೊಬ್ಬರ ಇದ್ದರು. ರಾತ್ರಿ ಮತ್ತೂರಿಗೆ ಹೋಗಲು ಸೂಳೆಬೈಲು ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಹಿಂಬದಿಯಿಂದ ರಾಡ್’ನಲ್ಲಿ ಹೊಡೆದಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಆರೋಪಿಗಳ ಪೈಕಿ ಒಬ್ಬ ವಿರುದ್ಧ ಗಾಂಜಾ ಸಂಬಂಧದ ಪ್ರಕರಣ ದಾಖಲಾಗಿತ್ತು. ಅವತ್ತು ರಾತ್ರಿ ವೈನ್ ಶಾಪ್ ಒಂದರಿಂದ ಮದ್ಯ ಸೇವಿಸಿ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ ಎಂದು ಎಸ್.ಪಿ ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.

Shimoga Nanjappa Hospital

ಕಾರನ್ನು ಬೈಕಿನಲ್ಲಿ ಹಿಂಬಾಲಿಸಿ ರಾಡ್’ನಿಂದ ಗಾಜು ಒಡೆದಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ಅಸ್ಗರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ – ಸೂಳೆಬೈಲ್ ಮುಖ್ಯರಸ್ತೆಯಲ್ಲಿ ಗೃಹ ಸಚಿವರಿಂದ ವಾರ್ನಿಂಗ್, ಏನಂದರು ಹೋಂ ಮಿನಿಸ್ಟರ್?

Leave a Comment