ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 1 ವರ್ಷ, ಈತನಕ ಓಡಾಡಿದ ಪ್ರಯಾಣಿಕರೆಷ್ಟು? ಇಲ್ಲಿದೆ ವರ್ಷದ 10 ಪ್ರಮುಖಾಂಶ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 27 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ವಿಮಾನ ನಿಲ್ದಾಣದ ಆರಂಭವಾಗಿ ಇಂದಿಗೆ ಒಂದು ವರ್ಷ. ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಬಂದಿಳಿದು ವಿಮಾನ ನಿಲ್ದಾಣ ಉದ್ಘಾಟಿಸಿದ್ದರು. ಈಗ ವಿಮಾನಯಾನ ಸೇವೆ ಆರಂಭವಾಗಿದ್ದು, ನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಹಾರಾಟ ನಡೆಸುತ್ತಿದ್ದಾರೆ.

PM-Narendra-Modi-In-Shimoga-Airport-Terminal

ವರ್ಷದ ಹಿನ್ನೋಟ, ಇಲ್ಲಿದೆ 10 ಪಾಯಿಂಟ್‌

POINT-12023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟಿಸಿದ್ದರು. ಇದಕ್ಕೂ ಮುನ್ನ ಪ್ರಧಾನಿಯ ವಿಮಾನ ಫೆ.21ರಂದು ಟ್ರಯಲ್‌ ಲ್ಯಾಂಡಿಂಗ್‌ ಮಾಡಿತ್ತು. ವಾಯುಸೇನೆಯ ಪೈಲೆಟ್‌ಗಳು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿ ವಿಮಾನವನ್ನು ಇಳಿಸಿ ಇತಿಹಾಸ ನಿರ್ಮಿಸಿದ್ದರು. ವಿಮಾನ ಸಾಫ್ಟ್‌ ಲ್ಯಾಂಡಿಂಗ್‌ ಆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಜನರು ಪುಳಕಗೊಂಡಿದ್ದರು.

PM-Narendra-Modi-Aircraft-in-Shimoga-Airport.

ಇಂಡಿಗೋ ವಿಮಾನ ಹಾರಾಟ

POINT-2ಕಳೆದ ವರ್ಷ ಆಗಸ್ಟ್‌ 31ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಸೇವೆ ಆರಂಭವಾಯಿತು. ಇಂಡಿಗೋ ಸಂಸ್ಥೆಯ ಎಟಿಆರ್‌ 72 ಮಾದರಿಯ ವಿಮಾನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಲ್ಯಾಂಡ್‌ ಆಯಿತು. ವಾಟರ್‌ ಸಲ್ಯೂಟ್‌ ನೀಡಿ ವಿಮಾನವನ್ನು ಸ್ವಾಗತಿಸಲಾಗಿತ್ತು. ಶಿವಮೊಗ್ಗ – ಬೆಂಗಳೂರು, ಬೆಂಗಳೂರು – ಶಿವಮೊಗ್ಗ ಮಧ್ಯೆ ನಿತ್ಯ ಇಂಡಿಗೋ ವಿಮಾನ ಸಂಚರಿಸುತ್ತಿದೆ.

First Flight - Indigo ATR 72 Flight in Shimoga Airport

ಮೂರು ಕಡೆಗೆ ಸ್ಟಾರ್‌ ಏರ್‌ಲೈನ್ಸ್‌ ಸೇವೆ

POINT-3ನವೆಂಬರ್‌ 21ರಂದು ಸ್ಟಾರ್‌ ಏರ್‌ಲೈನ್ಸ್‌ ಸೇವೆ ಆರಂಭವಾಯಿತು. ಹೈದರಾಬಾದ್‌ – ಶಿವಮೊಗ್ಗ, ಶಿವಮೊಗ್ಗ – ತಿರುಪತಿ, ತಿರುಪತಿ – ಶಿವಮೊಗ್ಗ, ಶಿವಮೊಗ್ಗ – ಗೋವಾ, ಗೋವಾ – ಶಿವಮೊಗ್ಗ, ಶಿವಮೊಗ್ಗ – ಹೈದರಾಬಾದ್‌ ಮಾರ್ಗಗಳಲ್ಲಿ ಸ್ಟಾರ್‌ ಏರ್‌ ಸೇವೆ ಒದಗಿಸುತ್ತಿದೆ.

Star-Air-begins-operation-from-Shimoga

ಈವರೆಗೂ ಓಡಾಡಿದ ಪ್ರಯಾಣಿಕರೆಷ್ಟು?

POINT-4ಸದ್ಯ ಶಿವಮೊಗ್ಗದಿಂದ ಹಾರಾಟ ನಡೆಸುತ್ತಿರುವ ಎಲ್ಲ ವಿಮಾನಗಳು ಶೇ.60 ರಿಂದ ಶೇ.70ರಷ್ಟು ಭರ್ತಿಯಾಗುತ್ತಿವೆ. ವೀಕೆಂಡ್‌ ಮತ್ತು ಹಬ್ಬಗಳ ಸಂದರ್ಭ ವಿಮಾನದ ಟಿಕೆಟ್‌ಗಳು ಸಂಪೂರ್ಣ ಬುಕ್‌ ಆಗುತ್ತಿವೆ. 2023ರ ಆ.31 ರಿಂದ 2024ರ ಫೆ.26ರವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ 288 ಬಾರಿ ವಿಮಾನಗಳು ಹಾರಾಟ ನಡೆಸಿದೆ. ವಿವಿಧೆಡೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರ ಸಂಖ್ಯೆ 11,681 ಮತ್ತು ಶಿವಮೊಗ್ಗದಿಂದ ವಿವಿಧೆಡೆಗೆ ತೆರಳಿದ ಪ್ರಯಾಣಿಕರ ಸಂಖ್ಯೆ 13,401.

star-Air-operation-starts-from-Shimoga-Airport

ಮುಂಬೈ, ಅಹಮದಾಬಾದ್‌ಗೆ ವಿಮಾನ

POINT-5ಶಿವಮೊಗ್ಗದಿಂದ ಮತ್ತಷ್ಟು ಮಾರ್ಗಗಳಿಗೆ ವಿಮಾನಯಾನ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಶಿವಮೊಗ್ಗದಿಂದ ಮುಂಬೈ ಮತ್ತು ಅಹಮದಾಬಾದ್‌ಗೆ ಸೇವೆ ಒದಗಿಸಲು ಇಂಡಿಗೋ ಸಂಸ್ಥೆ ಯೋಜಿಸಿದೆ. ಇದರ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುತ್ತಿದೆ.

Indigo-ATR-Flight-in-Shivamogga-Airport-Shimoga-Live-news.webp

ಖಾಸಗಿ ವಿಮಾನ, ಏರ್‌ ಆಂಬುಲೆನ್ಸ್‌

POINT-6ಕಳೆದ ಒಂದು ವರ್ಷದಲ್ಲಿ ಖಾಸಗಿ ವಿಮಾನಗಳು, ಏರ್‌ ಆಂಬುಲೆನ್ಸ್‌ ಕೂಡ ಇಲ್ಲಿಂದ ಹಾರಾಟ ನಡೆಸಿವೆ. ಮಧ್ಯೆ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣವಾಗಿರುವುದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ತೆರಳುವ ಗಣ್ಯರು, ಉದ್ಯಮಿಗಳು ಈ ವಿಮಾನ ನಿಲ್ದಾಣ ಬಳಸಿಕೊಂಡಿದ್ದಾರೆ. ವಿವಿಧ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರು, ಹಲವು ನಟ, ನಟಿಯರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಒಮ್ಮೆ ತುರ್ತು ಚಿಕಿತ್ಸೆ ಅಗ್ಯವಿದ್ದರಿಂದ ಒಬ್ಬರಿಗಾಗಿ ಏರ್‌ ಆಂಬುಲೆನ್ಸ್‌ ಕೂಡ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಿದೆ.

020823-Private-Jets-visit-Shivamogga-Airport-at-Sogane.webp

ಸರ್ಕಾರ ನಿರ್ವಹಿಸುತ್ತಿರುವ ಏಕೈಕ ನಿಲ್ದಾಣ

POINT-7ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯದ 9ನೇ ಡೊಮಾಸ್ಟಿಕ್‌ ನಿಲ್ದಾಣ. ರಾಜ್ಯದಲ್ಲಿ ಸರ್ಕಾರ ನಿರ್ವಹಣೆ ಮಾಡುತ್ತಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ಈ ಗ್ರೀನ್‌ಫೀಲ್ಡ್‌ ಏರ್‌ಪೋರ್ಟ್‌ ಅನ್ನು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿರ್ವಹಿಸುತ್ತಿದೆ. ಎಲ್ಲ ಬಗೆಯ ಹೈಟೆಕ್‌ ವ್ಯವಸ್ಥೆಯು ಇಲ್ಲಿದೆ.

Rahul Gandhi and Yogi Adityanath in Shimoga Aiprot

ಹೈ ಸೆಕ್ಯೂರಿಟಿ ವಿಮಾನ ನಿಲ್ದಾಣ

POINT-8ರಾಜ್ಯದ ಡೊಮಾಸ್ಟಿಕ್‌ ವಿಮಾನ ನಿಲ್ದಾಣಗಳ ಪೈಕಿ ಹೈಸೆಕ್ಯೂರಿಟಿ ವಿಮಾನ ನಿಲ್ದಾಣ ಇದಾಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಪೊಲೀಸರು ಭದ್ರತೆಯ ಉಸ್ತುವಾರಿ ಹೊತ್ತಿದ್ದಾರೆ. ವಿಮಾನ ನಿಲ್ದಾಣದ ಸುತ್ತಲು ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

Shimoga Airport Security

ಸದ್ಯದಲ್ಲೇ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ

POINT-9ಏರ್‌ ಬಸ್‌ ಎ320, ಬೋಯಿಂಗ್‌ 737 ಮಾದರಿಯ ವಿಮಾನಗಳು ಲ್ಯಾಂಡ್‌ ಆಗುವಷ್ಟು ಉದ್ದನೆಯ ರನ್‌ ವೇ ಇಲ್ಲಿದೆ. ನೈಟ್‌ ಲ್ಯಾಂಡಿಂಗ್‌ಗೆ ಅಗತ್ಯವಿರುವ ಕಾಮಗಾರಿ ನಡೆಯುತ್ತಿದೆ. ಎಲ್ಲ ಹವಾಮಾನದಲ್ಲು ವಿಮಾನಗಳು ಲ್ಯಾಂಡ್‌ ಆಗುವ ತಂತ್ರಾಂಶ ಅಳವಡಿಸುವ ಕೆಲಸ ಆಗಬೇಕಿದೆ. ಇದರಿಂದ ವಿಮಾನಗಳು ಎಲ್ಲ ಸಂದರ್ಭದಲ್ಲು ಲ್ಯಾಂಡ್‌ ಆಗಲು ಸಾಧ್ಯವಾಗಲಿದೆ.

Air Traffic Controller in Shimoga Airport

ಕಾರ್ಗೊ ಅವಕಾಶ ಕೋರಿದ ಸಂಸ್ಥೆಗಳು

POINT-10-ಪೋಸ್ಟ್‌, ಕೊರಿಯರ್‌ ಸೇರಿದಂತೆ ಸಣ್ಣಪುಟ್ಟ ಸರಕು ಸಾಗಣೆಗೆ ವಿಮಾನಯಾನ ಸಂಸ್ಥೆಗಳು ಅನುಮತಿ ಕೇಳಿವೆ. ಈಗ ಹಾರಾಟ ನಡೆಸುತ್ತಿರುವ ವಿಮಾನದಲ್ಲೆ ಕಾರ್ಗೊ ಕೊಂಡೊಯ್ಯಲಾಗುತ್ತದೆ. ಇದರಿಂದ ವಿಮಾನಯಾನ ಸಂಸ್ಥೆಗಳಿಗೆ ಲಾಭವಾಗಲಿದೆ. ಆದರೆ ಕಾರ್ಗೊದ ಭದ್ರತಾ ಪರಿಶೀಲನೆ ಅತ್ಯಂತ ಕಠಿಣವಾಗಿರಲಿದೆ. ಹಾಗಾಗಿ ಕಾರ್ಗೊಗೆ ಪ್ರತ್ಯೇಕ ಟರ್ಮಿನಲ್‌ ಕಟ್ಟಡದ ಅಗತ್ಯವಿದೆ. ಆದ್ದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ – ನಡು ರಸ್ತೆಯಲ್ಲೆ ನಿಂತ ಬಸ್ಸು, ಅದೇ ಮಾರ್ಗದಲ್ಲಿ ಬಂತು ಸಂಸದರ ಕಾರು, ಮುಂದೇನಾಯ್ತು? ಫೋಟೊ ವೈರಲ್

 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment