ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಡಿವೋರ್ಸ್ ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇಂಗ್ಲೆಂಡ್ನಿಂದ ಉಪನ್ಯಾಸಕಿಗೆ (ಹೆಸರು, ಊರು ಗೌಪ್ಯ) ಗಿಫ್ಟ್ ಕಳುಹಿಸಿರುವುದಾಗಿ ನಂಬಿಸಿ 4.05 ಲಕ್ಷ ರೂ. ವಂಚಿಸಿದ್ದಾನೆ. ಹೆಚ್ಚುವರಿ ಹಣಕ್ಕೆ ಬೇಡಿಕೆ ಬಂದಾಗ ಉಪನ್ಯಾಸಕಿಗೆ ಅನುಮಾನ ಮೂಡಿದೆ.
ವಂಚನೆ ಆಗಿದ್ದು ಹೇಗೆ?
ಡಿವೋರ್ಸ್ ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಇಂಗ್ಲೆಂಡ್ನಲ್ಲಿ ವೈದ್ಯ ಎಂದು ಹೇಳಿಕೊಂಡು ಡಾ.ಶಿವ ಎಂಬಾತ ಉಪನ್ಯಾಸಕಿಗೆ ಪರಿಚಯವಾಗಿದ್ದ. ಜ.27ರಂದು ವಾಟ್ಸಪ್ನಲ್ಲಿ ಮೆಸೇಜ್, ಕಾಲ್ ಮಾಡಿ ಪರಸ್ಪರ ಮಾತನಾಡಿದ್ದರು. ಜ.30ರಂದು ಇಂಗ್ಲೆಂಡ್ನಿಂದ ಸಪ್ರೈಸ್ ಗಿಫ್ಟ್ ಕಳುಹಿಸಿರುವುದಾಗಿ ಆತ ತಿಳಿಸಿದ್ದ. ಜ.31ರಂದು ಕೊರಿಯರ್ ಸರ್ವಿಸ್ನಿಂದ ಎಂಬಂತೆ ವ್ಯಕ್ತಿಯೊಬ್ಬ ಉಪನ್ಯಾಸಕಿಗೆ ಕರೆ ಮಾಡಿದ್ದ.
ಗಿಫ್ಟ್ ಪಡೆಯಲು ವಿವಿಧ ಜಾರ್ಜ್
ಇಂಗ್ಲೆಂಡ್ನಿಂದ ಕೊರಿಯರ್ ಬಂದಿದ್ದು ಇದಕ್ಕೆ 32,700 ರೂ. ಚಾರ್ಜ್ ಪಾವತಿಸಬೇಕು ಎಂದು ಕೊರಿಯರ್ ಬಾಯ್ ಎಂಬಂತೆ ನಟಿಸಿ ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದ. ಅಕೌಂಟ್ ನಂಬರ್ ಕೂಡ ಕಳುಹಿಸಿದ್ದ. ಬಳಿಕ ವಿವಿಧ ಜಾರ್ಜ್ ಕಟ್ಟಬೇಕು ಎಂದು 98 ಸಾವಿರ ರೂ. ಮತ್ತು 2.75 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದ. ನಂತರ ಆದಾಯ ತೆರಿಗೆ ಇಲಾಖೆಗೆ ಪಾವತಿಸಲು 6.70 ಲಕ್ಷ ರೂ. ಕಳುಹಿಸಿ ಎಂದು ಉಪನ್ಯಾಸಕಿಗೆ ತಿಳಿಸಿದ್ದ. ಅನುಮಾಗೊಂಡು ಪರಿಚಿತರಲ್ಲಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಉಪನ್ಯಾಸಕಿಗೆ ಅರಿವಾಗಿದೆ. ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಗ್ಲೆಂಡ್ ವೈದ್ಯನ ನಾಟಕ ಇದೆ ಮೊದಲಲ್ಲ
ಇಂಗ್ಲೆಂಡ್ ವೈದ್ಯನ ಸೋಗಿನಲ್ಲಿ ಲಕ್ಷಾಂತರ ರೂ. ವಂಚನೆ ಮಾಡುತ್ತಿರುವುದು ಇದೆ ಮೊದಲಲ್ಲ. ಸಾಮಾಜಿಕ ಜಾಲತಾಣಗಳು, ವಿವಿಧ ಆ್ಯಪ್ಗಳ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು ಬಣ್ಣದ ಮಾತುಗಳನ್ನಾಡಿ, ಗಿಫ್ಟ್ ಕಳುಹಿಸುವಾಗಿ ತಿಳಿಸಲಾಗುತ್ತದೆ. ವಿಮಾನ ನಿಲ್ದಾಣದಿಂದ ಅಥವಾ ಕೊರಿಯರ್ ಬಾಯ್ ಎಂದು ಕರೆ ಮಾಡಿ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚನೆ ಮಾಡಲಾಗುತ್ತಿದೆ. ಈ ಹಿಂದೆಯು ಶಿವಮೊಗ್ಗದಲ್ಲಿ ಇಂತಹ ಪ್ರಕರಣ ವರದಿಯಾಗಿತ್ತು.
ಇದನ್ನೂ ಓದಿ – ಒಂದೇ ತಿಂಗಳಲ್ಲಿ 69 ಲಕ್ಷ ವಾಟ್ಸಪ್ ಅಕೌಂಟ್ಗಳು ಬ್ಯಾನ್, ಕಾರಣವೇನು?