ಆಪರೇಷನ್‌ ಸಿಂಧೂರ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಯೋಧನ ಕುಟುಂಬಕ್ಕೆ ಅದ್ಧೂರಿ ಸ್ವಾಗತ, ಹೇಗಿತ್ತು? ಯಾರೆಲ್ಲ ಇದ್ದರು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಪಾಕಿಸ್ತಾನ ವಿರುದ್ಧದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಯೋಧ ವಿಜಯ್‌ ಕುಮಾರ್‌ ತವರೂರಿಗೆ ಮರಳಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅವರನ್ನು ಯುವ ಕಾಂಗ್ರೆಸ್‌ ಕಾರ್ಯಕರ್ತರು, ನಾಗರಿಕರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಜಮ್ಮುವಿನಲ್ಲಿ ಭಾರತೀಯ ಸೇನೆಯ ಎಲೆಕ್ಟ್ರಾನಿಕ್‌ ಮೆಕಾನಿಕ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಹವಾಲ್ದಾರ್‌ ವಿಜಯ್‌ ಕುಮಾರ್‌ ಕರ್ತವ್ಯದಲ್ಲಿದ್ದಾರೆ. ಆಪರೇಷನ್‌ ಸಿಂಧೂರದಲ್ಲಿ ಹವಾಲ್ದಾರ್‌ ವಿಜಯ ಕುಮಾರ್ ಅವರು ಮುಂಚೂಣಿ ಕಾರ್ಯಾಚರಣೆಯಲ್ಲಿದ್ದರು. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

Operation-Sindoor-Commando-Vijaykumar-welcomed-in-Shimoga

ಪತ್ನಿ ರೇಖಾ, ಪುತ್ರಿಯರಾದ ಸುಷ್ಮಿತಾ ಮತ್ತು ಶಿವನ್ಯಾ ಅವರೊಂದಿಗೆ ಹವಾಲ್ದಾರ್‌ ವಿಜಯ ಕುಮಾರ್‌ ಅವರು ಇವತ್ತು ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದರು. ರೈಲ್ವೆ ನಿಲ್ದಾಣದಲ್ಲಿ ಯೋಧ ವಿಜಯ ಕುಮಾರ್‌ ಅವರಿಗೆ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಕುಟುಂಬದವರು, ಶಿವಮೊಗ್ಗದ ನಾಗರಿಕರು ಹಾರ ಹಾಕಿ, ಸಿಹಿ ತಿನ್ನಿಸಿ ಸ್ವಾಗತಿಸಿದರು.

ಜಮ್ಮು ಕಾಶ್ಮೀರದ ಕತುವಾ ಜಿಲ್ಲೆಯ ಆರ್ಮಿ ಬೇಸ್‌ನಲ್ಲಿದ್ದೆವು. ಆಪರೇಷನ್‌ ಸಿಂಧೂರದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಂತೆ ನಮ್ಮೂರಿನಲ್ಲಿ ನಮಗೆ ಸಿಕ್ಕ ಸ್ವಾಗತ ಖುಷಿ ತಂದಿದೆ. ಪ್ರತಿ ಯೋಧನಿಗು ಇದು ಸ್ಪೂರ್ತಿ ಮತ್ತು ಉತ್ಸಾಹ ನೀಡಲಿದೆ.ಹವಾಲ್ದಾರ್‌ ವಿಜಯ ಕುಮಾರ್‌, ಯೋಧ

Operation-Sindoor-Commando-Vijaykumar-welcomed-in-Shimoga

ಸೇನಾ ವಸತಿ ನಿಲಯದ ಬಳಿ ಬಾಂಬ್‌ ಶಬ್ದ ಕೇಳುತಿತ್ತು. ಇವರು ಕಾರ್ಯಾಚರಣೆಗೆ ತೆರಳಿದ್ದಾಗ ಆತಂಕವಾಗುತಿತ್ತು. ಕೊನೆಗೆ ಸೇನಾ ವಸತಿ ನಿಲಯದಲ್ಲಿದ್ದ ಯೋಧರ ಕುಟುಂಬದವರನ್ನು ಅವರವರ ಊರಿಗೆ ಕಳುಹಿಸಿದ್ದರು. ಯೋಧನ ಪತ್ನಿ ಎಂಬ ಹೆಮ್ಮೆ ಇತ್ತು. ಆದರೆ ಇಂತಹ ಸಂದರ್ಭ ಆತಂಕವು ಇರುತ್ತದೆ.ರೇಖಾ, ಹವಾಲ್ದಾರ್‌ ವಿಜಯ ಕುಮಾರ್‌ ಪತ್ನಿ

Operation-Sindoor-Commando-Vijaykumar-welcomed-in-Shimoga

ಹವಾಲ್ದಾರ್‌ ವಿಜಯ್‌ ಕುಮಾರ್‌ ಅವರು ಶಿವಮೊಗ್ಗ ಸೀಗೆಹಟ್ಟಿ ನಿವಾಸಿಯಾಗಿದ್ದಾರೆ. ಇವತ್ತು ಅವರನ್ನು ಸ್ವಾಗತಿಸಲು ಕುಟುಂಬದವರು, ಶಾಲೆ, ಕಾಲೇಜು ಅವಧಿಯ ಸಹಪಾಠಿಗಳು ಆಗಮಿಸಿದ್ದರು.

https://chat.whatsapp.com/JPJ0lTQsTKf365Fqu6Q7cd

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪ್ರಸನ್ನ ಕುಮಾರ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರ್ಷಿತ್‌ ಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಕುಮಾರ್‌, ಪ್ರಮುಖರಾದ ಮಧುಸೂದನ್‌, ಚೇತನ್‌, ವಿಜಯ್‌ ಕುಮಾರ್‌ ಸೇರಿದಂತೆ ಹಲವರು ಇದ್ದರು.

Operation-Sindoor-Commando-Vijaykumar-welcomed-in-Shimoga

ಇದನ್ನೂ ಓದಿ » ಶಿವಮೊಗ್ಗ ಮಹಾನಗರ ಪಾಲಿಕೆಗೆ ನೂತನ ಕಮಿಷನರ್‌ ನೇಮಕ

Operation-Sindoor-Commando-Vijaykumar-welcomed-in-Shimoga

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment