ಪೊಲೀಸ್ ಎಸ್ಕಾರ್ಟ್​ನಲ್ಲಿ ಶಿವಮೊಗ್ಗಕ್ಕೆ ಆಕ್ಸಿಜನ್ ಟ್ಯಾಂಕರ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 MAY 2021

ದಿನೇ ದಿನೇ ಆಕ್ಸಿಜನ್‍ಗೆ ಬೇಡಿಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಿಗೆ ನಿರಂತರ ಆಕ್ಸಿಜನ್ ಪೂರೈಕೆಯಾಗಬೇಕಿದೆ. ಇವತ್ತು ಶಿವಮೊಗ್ಗಕ್ಕೆ ಬಂದ ಆಕ್ಸಿಜನ್ ಟ್ಯಾಂಕರ್‍ಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಬಳ್ಳಾರಿಯಿಂದ ಒಂದು ಟ್ಯಾಂಕರ್ ಆಕ್ಸಿಜನ್ ಇವತ್ತು ಶಿವಮೊಗ್ಗಕ್ಕೆ ಬಂದಿದೆ. ಹೊಳೆಹೊನ್ನೂರು ಮಾರ್ಗವಾಗಿ ಟ್ಯಾಂಕರ್ ಲಾರಿ ಆಗಮಿಸುತ್ತಿದ್ದಂತೆ ಶಿವಮೊಗ್ಗ ಪೊಲೀಸರು ಎಸ್ಕಾರ್ಟ್ ನೀಡಿದರು. ಬಿ.ಹೆಚ್‍.ರಸ್ತೆ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ತಲುಪಿತು.

ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಸಂಗ್ರಹ ಪ್ಲಾಂಟ್‍ಗೆ ಟ್ಯಾಂಕರ್‍ನಲ್ಲಿದ್ದ ಆಕ್ಸಿಜನ್ ಭರ್ತಿ ಮಾಡಲಾಗಿದೆ. ಈಗ ಭರ್ತಿಯಾಗಿರುವ ಆಕ್ಸಿಜನ್ ಒಂದೆ ದಿನಕ್ಕೆ ಖಾಲಿಯಾಗಲಿದೆ. ನಾಳೆ ಮತ್ತೊಂದು ಟ್ಯಾಂಕರ್‍ ಆಕ್ಸಿಜನ್ ಪೂರೈಕೆಯಾಗಬೇಕಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment