ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಮೇ 2020
ಹೊರ ರಾಜ್ಯದಿಂದ ಬಂದು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಂತೆ ಮಹಿಳೆಯೊಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಆರಂಭಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 35 ವರ್ಷದ ಮಹಿಳೆಯೊಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಇವರನ್ನು ಪೇಷೆಂಟ್ ನಂಬರ್ 2583 ಎಂದು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಗುರುತಿಸಲಾಗಿದೆ.
ಕ್ವಾರಂಟೈನ್ ಪೂರ್ಣಗೊಳಿಸಿ ಮನೆಗೆ ಹೋಗಿದ್ದರು
ಪಿ2583 ಅವರು ನವದೆಹಲಿಯಿಂದ ಹಿಂತಿರುಗಿದ್ದರು. ಹೊರ ರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ. ಹಾಗಾಗಿ ಇವರನ್ನು ಜಿಲ್ಲಾಡಳಿತವೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಿತ್ತು. ಈ ವೇಳೆ ಕರೋನ ಲಕ್ಷಣವಿಲ್ಲದೆ ಇದ್ದಿದ್ದರಿಂದ ಮತ್ತು ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದರಿಂದ ಪಿ2583 ಅವರನ್ನು ಮನೆಗೆ ಕಳುಹಿಸಲಾಗಿತ್ತು. ಅವರು ಭದ್ರಾವತಿಯಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ನಾಲ್ಕು ಗಂಟೆಯಲ್ಲಿ ಮತ್ತೆ ಕ್ವಾರಂಟೈನ್‍ಗೆ
‘ಮನೆಗೆ ಹೋಗಿ ನಾಲ್ಕು ಗಂಟೆಯಲ್ಲಿ ಲ್ಯಾಬ್ ರಿಪೋರ್ಟ್ ಬಂದಿದೆ. ಅದರಲ್ಲಿ ಮಹಿಳೆಗೆ ಕರೋನ ಸೋಂಕು ದೃಢಪಟ್ಟಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು, ಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗು ಕ್ವಾರಂಟೈನ್
ಪಿ2583 ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ನಾಲ್ಕು ಗಂಟೆ ಅವಧಿಯಲ್ಲಿ ಕುಟುಂಬದವರೊಂದಿಗೆ ಇದ್ದರು. ಹಾಗಾಗಿ ಅವರನ್ನಷ್ಟೆ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಹೊರಗೆಲ್ಲೂ ಹೋಗದೆ, ಯಾರನ್ನೂ ಭೇಟಿಯಾಗದೆ ಮನೆಯಲ್ಲೆ ಇದ್ದಿದ್ದರಿಂದ ಯಾವುದೆ ಆತಂಕವಿಲ್ಲ. ಹಾಗಾಗಿ ಪ್ರಾಥಮಿಕ ಮತ್ತು ಸಕೆಂಡರಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ತಲೆನೋವಿನಿಂದ ಜಿಲ್ಲಾಡಳಿತ ಪಾರಾಗಿದೆ. ಅಲ್ಲದೆ ಜನರು ಆತಂಕಕ್ಕೊಳಗಾಗುವುದು ತಪ್ಪಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422