ಶಿವಮೊಗ್ಗದಲ್ಲಿ ಅಂಬಾರಿ ಮೆರವಣಿಗೆ, ಕೇಬಲ್‌ ತೆರವಿಗೆ ಸೂಚನೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA NEWS, 8 OCTOBER 2024 : ಶಿವಮೊಗ್ಗ ದಸರಾ ಹಿನ್ನೆಲೆ ಅ.12ರಂದು ನಗರದಲ್ಲಿ ಜಂಬೂ ಸವಾರಿ ನಡೆಯಲಿದೆ. ಈ ಹಿನ್ನಲೆ ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ಕೇಬಲ್‌ ವಯರ್‌ಗಳನ್ನು (Cable Wire) ತೆರವು ಮಾಡುವಂತೆ ಮಹಾನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಬಾರಿ ಮೆರವಣಿಗೆಯು ಕೋಟೆ ರಸ್ತೆಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪ ನಾಯಕ ವೃತ್ತ , ಅಮೀರ್ ಅಹ್ಮದ್ ವೃತ್ತ, ಗೋಪಿ ಸರ್ಕಲ್, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಫ್ರೀಡಂ ಪಾರ್ಕ್ ಮಾರ್ಗದಲ್ಲಿ ದಸರಾ ಮೆರವಣಿಗೆ ನಡೆಯಲಿದೆ. ಅಂಬಾರಿ ಸಂಚರಿಸುವ ಈ ರಸ್ತೆಗಳಲ್ಲಿ ನೆಲದಿಂದ ಮೇಲೆ 20 ಅಡಿಯೊಳಗೆ ಹಾದು ಹೋಗಿರುವ ಎಲ್ಲಾ ಕೇಬಲ್, ವಯರ್, ತಂತಿಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಆರು ಕತ್ತೆಗಳ ಕಳ್ಳತನ

Leave a Comment