ಶಿವಮೊಗ್ಗ ಬಸ್‌ ನಿಲ್ದಾಣದಿಂದ ಶಿವಪ್ಪನಾಯಕ ಪ್ರತಿಮೆವರೆಗೆ ಪಂಜಿನ ಮೆರವಣಿಗೆ, ಸಾರ್ವಜನಿಕ ಸಭೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 AUGUST 2023

SHIMOGA : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ (BJP) ವತಿಯಿಂದ ವಿಭಜನ್‌ ವಿಭಿಷಿಕಾ ಸ್ಮೃತಿ ದಿವಸ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಅಶೋಕ ವತ್ತದಿಂದ (Ashoka Circle) ಶಿವಪ್ಪನಾಯಕ ಪ್ರತಿಮೆವರೆಗೆ ಪಂಜಿನ ಮೆರವಣಿಗೆ (Panjina Mervanige) ನಡೆಸಲಾಯಿತು. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಸಾರ್ವಜನಿಕ ಸಭೆ ನಡೆಸಲಾಯಿತು.

ಯಾರೆಲ್ಲ ಏನೇನು ಹೇಳಿದರು?

ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದ್ದು ಒಂದೆರಡು ದಿನವಲ್ಲ. ಮೊಘಲರು, ಬ್ರಿಟೀಷರ ವಿರುದ್ಧ ದೇಶಭಕ್ತರ ಹೋರಾಟ ಮಾಡಿದರು. ಆದರೆ ಅಧಿಕಾರಕ್ಕಾಗಿ ದೇಶವನ್ನು ಭಾರತ, ಪಾಕಿಸ್ತಾನ ಎಂದು ಒಡೆದವರು ಕಾಂಗ್ರೆಸಿಗರು. ಆ ಪಕ್ಷದ ಮುಖಂಡರು ಯುವಕರ ಕ್ಷಮೆ ಕೇಳಬೇಕು. ಈಗ ಪಾಕಿಸ್ತಾನದಲ್ಲಿಯು ಜನರು ನರೇಂದ್ರ ಮೋದಿ ಅವರು ತಮ್ಮ ದೇಶದ ಪ್ರಧಾನಿ ಆಗಬೇಕು ಎಂದು ಬಯಸುತ್ತಿದ್ದಾರೆ. ಮುಂದೆ ಪಾಕಿಸ್ತಾನವು ಭಾರತದಲ್ಲಿ ಸೇರಲಿದ್ದು ಅಖಂಡ ಭಾರತ ನಿರ್ಮಾಣವಾಗಲಿದೆ.

panjina meravanige by Shimoga BJP

ಎಂ.ಬಿ.ಭಾನುಪ್ರಕಾಶ್‌, ಮಾಜಿ ಎಂಎಲ್‌ಸಿ : ಪಠ್ಯ ಪುಸ್ತಕದಿಂದ ಸಾವರ್ಕರ್‌ ಅವರ ಪಾಠ ತೆಗೆಯಲಾಗಿದೆ. ಅದೇ ಕಾರಣಕ್ಕೆ ಜಿಲ್ಲಾ ಪಂಚಾಯಿತಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸುವಾಗ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಓದುವ ಗುಣವಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹುಟ್ಟಿರಲಿಲ್ಲ. ಅವರು ಹೋರಾಟಗಾರರ ಕುರಿತು ಹಗುರವಾಗಿ ಮಾತನಾಡಬಾರದು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸರ್ಕಾರಿ ಕಚೇರಿಗಳು ಜಗಮಗ, ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ರಂಗೋಲಿ ಹಬ್ಬ

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್‌.ಅರುಣ್‌, ಪ್ರಮುಖರಾದ ಗಿರೀಶ್‌ ಪಟೇಲ್‌, ಎಸ್.ದತ್ತಾತ್ರಿ, ಮೇಯರ್‌ ಶಿವಕುಮಾರ್‌ ಸೇರಿದಂತೆ ಹಲವರು ಪಂಜಿನ ಮೆರವಣಿಗೆಯಲ್ಲ ಪಾಲ್ಗೊಂಡರು.

PARISHRAMA neet academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment