ದುರ್ಗಿಗುಡಿ ಶಾಲೆ ಮತಗಟ್ಟೆ ಮುಂದೆ ಸರ್ವ ಪಕ್ಷದಿಂದ ಪ್ರತಿಭಟನೆ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

ELECTION NEWS : ಮತದಾನಕ್ಕೆ ಹೆಚ್ಚುವರಿ ಕಾಲವಕಾಶ ನೀಡಬೇಕು ಎಂದು ಆಗ್ರಹಿಸಿವ ಸರ್ವ ಪಕ್ಷಗಳ ಕಾರ್ಯಕರ್ತರು ಮತಗಟ್ಟೆ ಮುಂಭಾಗ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ದುರ್ಗಿಗುಡಿ ಶಾಲೆಯ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರ ಆಗ್ರಹವೇನು?

ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ದುರ್ಗಿಗುಡಿ ಶಾಲೆಯಲ್ಲಿ ಬೆಳಗ್ಗೆ ಅರ್ಧ ಗಂಟೆ ತಡವಾಗಿ ಮತದಾನ ಶುರುವಾಗಿತ್ತು. ಸಂಜೆ ಹೆಚ್ಚುವರಿ ಸಮಯ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಸಂಜೆ 6 ಗಂಟೆಗೆ ಗೇಟ್‌ ಬಂದ್‌ ಮಾಡಿದ್ದಾರೆ. ಇದರಿಂದ ಹಲವರು ಮತದಾನದಿಂದ ವಂಚಿತವಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ದುರ್ಗಿಗುಡಿ ಶಾಲೆಯಲ್ಲಿರುವ ಮತಗಟ್ಟೆ ಮುಂಭಾಗ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹೆಚ್ಚುವರಿ ಕಾಲವಕಾಶ ನೀಡುವ ಭರವಸೆ ನೀಡಿದರು. ಈ ಹಿನ್ನೆಲೆ ವಿವಿಧ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.

ಇದನ್ನೂ ಓದಿ – ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ ಗಂಟೆಯಿಂದ ಮತದಾನ ಸ್ಥಗಿತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment