SHIVAMOGGA LIVE NEWS | 14 NOVEMBER 2023
SHIMOGA : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖ್ಯಾತಿ ಹೊಂದಿದ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ ಕುರಿತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೈಗೊಂಡ ಸಂಶೋಧನೆಗೆ ಪೇಟೆಂಟ್ ದೊರೆತಿದೆ.
ವಿವಿ ಸಂಶೋಧನಾ ವಿದ್ಯಾರ್ಥಿ ಡಾ. ಭಾಗಣ್ಣ ಹರಳಯ್ಯ ಅವರು ಅನುವಂಶಿಕ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ಡಿ.ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಕೈಗೊಂಡ ಪಿಎಚ್‌ಡಿ ಸಂಶೋಧನೆಗೆ ಈ ಗೌರವ ಸಂದಿದೆ.
ಕಡುಗೆಂಪು ಬಣ್ಣ, ಸುಕ್ಕುಗಟ್ಟಿದ ಮೇಲ್ಫ್, ವಿಶೇಷ ರುಚಿ, ಅತಿ ಹೆಚ್ಚು ಓಲಿಯೋರೈಸಿನ್ ಅಂಶ ಮತ್ತು ಕಡಿಮೆ ಖಾರದ ಅಂಶ ಹೀಗೆ ವಿಶೇಷ ಗುಣ ಹೊಂದಿರುವ ಈ ಬೆಳೆಗೆ ಭೌಗೋಳಿಕ ಸೂಚ್ಯಂಕ (ಜಿಯೋಗ್ರಾಫಿಕಲ್ ಇಂಡಿಕೇಷನ್) ಕೂಡ ಲಭಿಸಿದೆ. ಈ ಬೆಳೆಗೆ ಭೌಗೋಳಿಕ ಸೂಚ್ಯಂಕ ಕೊಡಿಸುವಲ್ಲಿ ಡಾ. ಎಚ್.ಡಿ.ಮೋಹನ್ ಕುಮಾರ್ ಪಾತ್ರ ದೊಡ್ಡದಿದೆ.
ಇದನ್ನೂ ಓದಿ – ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್, ನೇರ ಮಾರಾಟಕ್ಕೆ ಅವಕಾಶ, ದರ ಎಷ್ಟು? ಮಾರಾಟ ಪ್ರಕ್ರಿಯೆ ಹೇಗೆ?
ಬ್ಯಾಡಗಿ ಮೆಣಸಿನಕಾಯಿ ಬೆಳೆಯು ವರ್ಷದಿಂದ ವರ್ಷಕ್ಕೆ ಅದರ ಮೂಲ ಗುಣಲಕ್ಷಣಗಳು ಮತ್ತು ಇಳುವರಿ ಕಡಿಮೆಯಾಗುತ್ತಿದೆ ಎಂದು ವಿಜ್ಞಾನಿಗಳು ಕೈಗೊಂಡ ಸರ್ವೇಯಲ್ಲಿ ರೈತರು, ವ್ಯಾಪಾರಿಗಳು ಮತ್ತು ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದ ರೈತರಿಗೆ ಮತ್ತು ಓಲಿಯೋರೈಸಿನ್ ಇಂಡಸ್ಟ್ರಿಗೆ ನಷ್ಟ ಉಂಟಾಗುತ್ತಿದೆ. ಮುಂದುವರಿದು ರೂಢಿಯಲ್ಲಿರುವ ಸಸ್ಯ ಅಭಿವೃದ್ಧಿ ಪದ್ಧತಿಯಿಂದ ಕಡಿಮೆ ಅವಧಿಯಲ್ಲಿ ಹೋಮೋಜೈಗಸ್ ಲೈನ್‌ಗಳನ್ನು ಅಭಿವೃದ್ಧಿಪಡಿಸಿ ಈ ಬೆಳೆಯ ಮೂಲ ಗುಣಲಕ್ಷಣ ಬದಲಿಸದೆ ಅಭಿವೃದ್ಧಿ ಪಡಿಸುವುದು ವಿಜ್ಞಾನಿಗಳಿಗೆ ಸವಾಲಾಗಿತ್ತು.
ಈ ಹಿನ್ನೆಲೆ ಪ್ರಾಧ್ಯಾಪಕ ಡಾ. ಎಚ್.ಡಿ.ಮೋಹನ್ ಕುಮಾರ್ ಮತ್ತು ಸಂಶೋಧನಾ ವಿದ್ಯಾರ್ಥಿ ಡಾ. ಭಾಗಣ್ಣ ಹರಳಯ್ಯ ಅವರು ಬೆಂಗಳೂರಿನ ಐ ಆ್ಯಂಡ್ ಬಿ ಪ್ರೈ.ಲಿ. ಕಂಪನಿ ಸಹಯೋಗದಲ್ಲಿ ಕಡಿಮೆ ಅವಧಿಯಲ್ಲಿ ಪರಿಪೂರ್ಣ ಹೋಮೋಜೈಗಸ್ ಡಬ್ಬಲ್ ಹ್ಯಾಪ್ಲಾಯ್ಡ್ ಲೈನ್‌ಗಳನ್ನು ಅಭಿವೃದ್ಧಿಪಡಿಸಲು 2015ರಲ್ಲಿ ಸಂಶೋಧನೆ ಆರಂಭಿಸಿ ಅಂಗಾಂಶ ಕೃಷಿ ತಂತ್ರಜ್ಞಾನ ಪದ್ಧತಿಗಳಲ್ಲಿ ಒಂದಾದ ಇನ್‌ವಿಟ್ರೋ ಆ್ಯಂಥರ್ ಕಲ್ಟರ್ ವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ – ಮೈಸೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರದ 3 ರೈಲುಗಳು 2 ದಿನ ರದ್ದು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200