ಗಾಂಜಾ, ಮಾದಕ ವಸ್ತುಗಳಿಗೆ ಬ್ರೇಕ್ ಹಾಕಲು ಶಿವಮೊಗ್ಗದಲ್ಲಿ ಪಿಸಿಒ ಸ್ಥಾಪನೆಗೆ ಪ್ಲಾನ್, ಏನಿದು ಪಿಸಿಒ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 APRIL 2021

ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸರು ವಿಭಿನ್ನ ಪ್ಲಾನ್ ಮಾಡಿದ್ದಾರೆ.  ಪೊಲೀಸ್ ಇಲಾಖೆ ವತಿಯಿಂದ ಕೋ- ಆರ್ಡಿನೇಷನ್ ಆಫೀಸರ್ (ಪಿಸಿಒ) ನೇಮಿಸಲು ಚಿಂತಿಸಲಾಗಿದೆ.

ವಿವಿಧ ಕಾಲೇಜಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಸಿಬ್ಬಂದಿಗಳು ಅಥವಾ ವಿದ್ಯಾರ್ಥಿಗಳನ್ನು ಪಿಸಿಒ ಆಗಿ  ಆಯ್ಕೆ ಮಾಡಲಾಗುತ್ತದೆ. ಕಾಲೇಜು ಕ್ಯಾಂಪಸ್‍ನಲ್ಲಿ ಯಾವುದೆ ಅಸಹಜ ಬೆಳವಣಿಗೆ ಕಂಡು ಬಂದಲ್ಲಿ, ಈ ಪಿಸಿಒಗಳು ಪೊಲೀಸರ ಗಮನಕ್ಕೆ ತಂದರೆ ಸಾಕು, ಉಳಿದಂತೆ ಖಾಕಿ ಪಡೆ ಕ್ರಮ ಕೈಗೊಳ್ಳಲಿದೆ.

ಕಾಲೇಜಿನಲ್ಲಿ ಗಾಂಜಾ ಬೇರು ಕಟ್

ಕಾಲೇಜು ಹಂತದಲ್ಲಿ ಪಸರಿಸುತ್ತಿರುವ ಗಾಂಜಾ ಬೇರು ಕಡಿತಲೆಗೆ ಇಲಾಖೆ ಈ ಯೋಜನೆಗೆ ಮುಂದಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳ ಮೇಲೆ ಪೊಲೀಸರೇ ಗಮನ ಇಡುವುದು ಕಷ್ಟ. ಹೀಗಾಗಿ, ಪಿಸಿಒ ಮೂಲಕ ಗಾಂಜಾ ಮಾರಾಟಗಾರರ ಮೇಲೆ ನಿಗಾ ಇಡಬಹುದಾಗಿದೆ ಎನ್ನುವುದು ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ಅವರ ಅಭಿಮತ.

ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿಲ್ಲ. ಕಾಲೇಜು ಪುನರಾರಂಭ ಬಳಿಕ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ‘ಶಿವಮೊಗ್ಗ ಲೈವ್.ಕಾಂ’ಗೆ ತಿಳಿಸಿದ್ದಾರೆ.

169156027 1364252827269467 1780089436742363326 n.jpg? nc cat=100&ccb=1 3& nc sid=730e14& nc ohc=U1OaitYn8u4AX8CnNCD& nc ht=scontent.fblr4 3

ಗಾಂಜಾ ಅಮಲಿನಲ್ಲಿ ಅಪರಾಧ ಕೃತ್ಯಗಳನ್ನು ನಡೆಸಲಾಗುತ್ತಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಮೇಲಿನ ಹಲ್ಲೆ ಪ್ರಕರಣಗಳು ಇದಕ್ಕೆ ಉದಹಾರಣೆ. ಇದಕ್ಕೆ ಮೂಗುದಾರ ಹಾಕಲು ಪೊಲೀಸ್‌ ಇಲಾಖೆ ಸಾರ್ವಜನಿಕರ ಸಹಭಾಗಿತ್ವ ಪಡೆಯಲು ಮುಂದಾಗಲಿದೆ.

20 ತಿಂಗಳಲ್ಲಿ 128 ಕೇಸ್‌

ಕಳೆದ 20 ತಿಂಗಳಲ್ಲಿ ಜಿಲ್ಲೆಯಲ್ಲಿ 128ಕ್ಕೂ ಅಧಿಕ ಗಾಂಜಾ ಸಾಗಣೆ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. 284 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 386 ಕೆಜಿ ಹಸಿ ಮತ್ತು ಒಣ ಗಾಂಜಾ ಜಪ್ತಿ ಮಾಡಲಾಗಿದೆ.

2019ರ ಆಗಸ್ಟ್‌ 3ರಿಂದ ಡಿಸೆಂಬರ್‌ 31ರ ವರೆಗೆ 28 ಪ್ರಕರಣ ದಾಖಲಿಸಿ 56 ಆರೋಪಿಗಳನ್ನು ಬಂಧಿಸಲಾಗಿದೆ. 14 ಕೆಜಿ ಒಣ ಗಾಂಜಾ, 138 ಕೆಜಿ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

2020ರಲ್ಲಿ 89 ಪ್ರಕರಣಗಳನ್ನು ದಾಖಲಿಸಿ  ಒಟ್ಟು 203 ಆರೋಪಿಗಳನ್ನು ಬಂಧಿಸಲಾಗಿದೆ. 41 ಕೆಜಿ ಒಣ, 186 ಕೆಜಿ ಹಸಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

2021ರ ಜನವರಿಯಿಂದ ಮಾರ್ಚ್‌ 31ರ ವರೆಗೆ 11 ಪ್ರಕರಣಗಳನ್ನು ದಾಖಲಿಸಿ, ಒಟ್ಟು 25 ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ 7 ಕೆಜಿ ಒಣ ಗಾಂಜಾ ಜಪ್ತಿ ಮಾಡಲಾಗಿದೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment