ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ, ಈ ತಿಂಗಳಲ್ಲಿ 14ನೇ ಬಾರಿ ಏರಿಕೆಯಾಯ್ತು ಪೆಟ್ರೋಲ್ ರೇಟ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 JUNE 2021

ಶಿವಮೊಗ್ಗ ಜಿಲ್ಲೆಯಲ್ಲಿ ಪುನಃ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಇವತ್ತು 36 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್‍ ಪೆಟ್ರೋಲ್ ಬೆಲೆ 102.78 ರೂ.ಗೆ ಏರಿಕೆಯಾದಂತಾಗಿದೆ.

ಜೂನ್ ತಿಂಗಳಲ್ಲಿ 14 ಬಾರಿ ಪೆಟ್ರೋಲ್ ದರ ಹೆಚ್ಚಳವಾಗಿದೆ. ಈವರೆಗೂ ಈ ತಿಂಗಳಲ್ಲಿ ಪ್ರತಿ ಲೀಟರ್‍ಗೆ 4.12 ರೂ. ಏರಿಕೆಯಾಗಿದೆ.

ಯಾವ್ಯಾವ ದಿನ ಎಷ್ಟೆಷ್ಟು ಏರಿದೆ?

ಜೂನ್ 1ರಂದು 27 ಪೈಸೆ ಹೆಚ್ಚಳವಾಗಿತ್ತು. ಜೂನ್ 4ರಂದು 28 ಪೈಸೆ, ಜೂನ್ 6ಕ್ಕೆ 28 ಪೈಸೆ, ಜೂನ್ 7ರಂದು 29 ಪೈಸೆ, ಜೂನ್ 9ರಂದು 26 ಪೈಸೆ, ಜೂನ್ 11ರಂದು 30 ಪೈಸೆ, ಜೂನ್ 12ರಂದು 28 ಪೈಸೆ, ಜೂನ್ 14ರಂದು 40 ಪೈಸೆ, ಜೂನ್ 16ರಂದು 26 ಪೈಸೆ, ಜೂನ್ 18ರಂದು 28 ಪೈಸೆ, ಜೂನ್ 20ರಂದು 30 ಪೈಸೆ, ಜೂನ್ 22ರಂದು 29 ಪೈಸೆ, ಜೂನ್ 24ರಂದು 27 ಪೈಸೆ, ಜೂನ್ 26ರಂದು 36 ಪೈಸೆ ಏರಿಕೆಯಾಗಿದೆ.

Kalleshwara-Enterprises.webp

ಡಿಸೇಲ್ ದರವು ದುಬಾರಿ

ಇವತ್ತು ಜಿಲ್ಲೆಯಲ್ಲಿ ಡಿಸೇಲ್‍ ಬೆಲೆಯು ಹೆಚ್ಚಾಗಿದೆ. ಪ್ರತಿ ಲೀಟರ್‍ ಡಿಸೇಲ್‍ಗೆ 37 ಪೈಸೆ ಏರಿಕೆಯಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಡಿಸೇಲ್‍ ದರ ಪ್ರತಿ ಲೀಟರ್‍ಗೆ 95.18 ರೂ.ಗೆ ತಲುಪಿದೆ. ಜೂನ್ ತಿಂಗಳಲ್ಲಿ ಈವರೆಗೂ ಪ್ರತಿ ಲೀಟರ್‍ಗೆ 3.72 ರೂ. ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಪವರ್ ಪಟ್ರೋಲ್ ರೇಟು 106.33 ರೂ. ಟರ್ಬೊ ಜೆಟ್‍ ಪೆಟ್ರೋಲ್ ಪ್ರತಿ ಲೀಟರ್‍ಗೆ 98.51 ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಖಾಸಗಿ ಬಸ್ ಪುನಾರಂಭ ವಿಳಂಬಕ್ಕೆ ಐದು ಕಾರಣ, ಏನದು?

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment