ಶಿವಮೊಗ್ಗ ಲೈವ್.ಕಾಂ | SHIMOGA NEWS | 09 JUNE 2021
ದೇಶದ ನಾನಾ ಭಾಗದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ನೂರು ರೂಪಾಯಿಗೆ ತಲುಪಿದೆ. ಇವತ್ತು ಶಿವಮೊಗ್ಗದಲ್ಲೂ ಪೆಟ್ರೋಲ್ ದರ ನೂರರ ಗಡಿ ದಾಟಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಲ್ಲಿ ಸಾಮಾನ್ಯ ಪೆಟ್ರೋಲ್ ದರ 0.26 ಪೈಸೆ ಹೆಚ್ಚಳವಾಗಿದ್ದು ಇವತ್ತು ಪ್ರತಿ ಲೀಟರ್ ಬೆಲೆ 100.14 ರೂ.ಗೆ ತಲುಪಿದೆ. ಪವರ್ ಪೆಟ್ರೋಲ್ ಪ್ರತಿ ಲೀಟರ್ಗೆ 103.69 ರೂ. ಆಗಿದೆ. ಜಿಲ್ಲೆಯಲ್ಲಿ ಡಿಸೇಲ್ ಪ್ರತಿ ಲೀಟರ್ಗೆ 92.87 ರೂ. ಇದೆ.
ಮೇ ತಿಂಗಳಲ್ಲಿ ನೂರರ ಗಡಿಗೆ
ಜಿಲ್ಲೆಯಲ್ಲಿ ಮೇ.1ರಂದು ಪ್ರತಿ ಲೀಟರ್ ಪೆಟ್ರೋಲ್ಗೆ 94.6 ರೂ. ಇತ್ತು. ಮೇ.5ರಂದು 95.15 ರೂ. ಮೇ 10ಕ್ಕೆ 95.96 ರೂ. ಮೇ 15ಕ್ಕೆ 96.8 ರೂ., ಮೇ.20ರಂದು 97.33 ರೂ.ಗೆ ತಲುಪಿತ್ತು. ಮೇ 25 ಕ್ಕೆ 97.94 ರೂ. ಮೇ 31ರಂದು 99.03 ರೂ. ಪ್ರತಿ ಲೀಟರ್.ಗೆ ತಲುಪಿತ್ತು.
ಪೈಸೆ ಪೈಸೆ ಏರಿಕೆ
ಜೂನ್ 1ರಂದು 99.03ರೂ. ಇದ್ದ ಪ್ರತಿ ಲೀಟರಗ ಪೆಟ್ರೋಲ್ ಬೆಲೆ ಪೈಸೆ ಪೈಸೆ ಎರಿಕೆಯಾಗಿ ನೂರರ ಗಡಿ ದಾಟಿದೆ. ಜೂನ್ 4ರಂದು 0.28 ಪೈಸೆ ಹೆಚ್ಚಳವಾಗಿ ಪ್ರತಿ ಲೀಟರ್ ಬೆಲೆ 99.31ರೂ.ಗೆ ತಲುಪಿತ್ತು. ಜೂನ್ 6ರಂದು 99.51 ರೂ, ಜೂನ್ 7ರಂದು 99.88 ರೂ.ಗೆ ತಲುಪಿತ್ತು. ಈಗ 0.26 ಪೈಸೆ ಹೆಚ್ಚಳವಾಗಿ ಶತಕ ತಲುಪಿದೆ.
ಏರುತ್ತಲೆ ಇದೆ ಪೆಟ್ರೋಲ್ ದರ
ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ದುಬಾರಿಯಾಗುತ್ತಲೆ ಇದೆ. ಕಳೆದ ವರ್ಷ ಪ್ರತಿ ಲೀಟರ್ ದರ 74.62 ರೂ. ಇತ್ತು. ಆರು ತಿಂಗಳ ಹಿಂದೆ 84.96 ರೂ.ಗೆ ತಲುಪಿತ್ತು. ಮೂರು ತಿಂಗಳ ಹಿಂದೆ 91.03 ರೂ.ಗೆ ಏರಿಕೆಯಾಯ್ತು. ಈಗ 100.14 ರೂ.ಗೆ ಏರಿಕೆಯಾಗಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]