ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |10 JANUARY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ : ದರ್ಬಲ ಸರ್ಕಾರಗಳಷ್ಟೆ ಹುಳ, ಹುಪ್ಪಟೆಗಳ ಸಹಕಾರ ಪಡೆಯುತ್ತವೆ. ಜನರಿಗೆ ಉತ್ತರ ಕೊಡಬೇಕಾದ ಸರ್ಕಾರಗಳು ಎಂದಿಗು ರೌಡಿಗಳ ಸಹಾಯ ಪಡೆಯುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. (Photo)
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸುದ್ದಿಗೋಷ್ಠಿಯಲ್ಲಿ ಸ್ಯಾಂಟ್ರೋ ರವಿ ಪ್ರಕರಣ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಭಾಸ್ಕರ್ ರಾವ್ ಉತ್ತರಿಸಿದರು. ಜನರಿಗಷ್ಟೆ ಉತ್ತರ ನೀಡಬೇಕಾದ ಸರ್ಕಾರ ಇಂತಹವರ ಸಹಕಾರ ಪಡೆಯುವುದಿಲ್ಲ ಎಂದರು.
ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ. ಪ್ರವೀಣ್ ಸೂದ್ ಅವರು ಆತನ ವಿರುದ್ಧ ಮೈಸೂರಿನಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ನಾವು ಆತನ ವಿರುದ್ಧ ಕೇಸ್ ಹಾಕಿದ್ದೆವು ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬರಲಿದ್ದಾರೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಫೋಟೊಗಳಿಗೆ ನಿರ್ಬಂಧ ಹೇರಬೇಕಿದೆ
ರಾಜಕಾರಣಿಗಳ ಜೊತೆಗೆ ಫೋಟೊ (Photo)ತೆಗೆಸಿಕೊಳ್ಳುವುದಕ್ಕೆ ನಿಯಂತ್ರಣ ಹೇರಬೇಕಿದೆ. ಕೆಲವರು ರಾಜಕಾರಣಿಗಳ ಜೊತೆಗೆ ಫೋಟೊ ತೆಗಿಸಿಕೊಂಡು, ತಾವು ಅವರೊಂದಿಗೆ ಆಪ್ತರು ಎಂದು ಬಿಂಬಿಸಿಕೊಳ್ಳುತ್ತಾರೆ. ಬಳಿಕ ಜನರಿಗೆ ವಂಚಿಸುತ್ತಾರೆ. ಬೆಂಗಳೂರಿನಲ್ಲಿ ಇಂತಹ ಹಲವು ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.