ಶಿವಮೊಗ್ಗ ಸಮಾವೇಶದಲ್ಲಿ ಜನರ ಬಳಿ ಬರಲಿದ್ದಾರೆ ಪ್ರಧಾನಿ ಮೋದಿ, ಡಿಫರೆಂಟ್‌ ಎಂಟ್ರಿಗೆ ಬಿಜೆಪಿ ಪ್ಲಾನ್‌, ಹೇಗದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MARCH 2024

SHIMOGA : ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ವೇದಿಕೆಗೆ ಆಗಮಿಸುವುದಿಲ್ಲ. ಬದಲಾಗಿ ಜನರ ಮಧ್ಯದಿಂದ ತೆರಳಲಿದ್ದಾರೆ. ಇದಕ್ಕಾಗಿ ಸಂಪೂರ್ಣ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರು ಸಭೀಕರ ಮಧ್ಯದಿಂದ ಹಾದು ಹೋಗಲಿದೆ. ಇದಕ್ಕಾಗಿ ಸಮಾವೇಶದ ಪೆಂಡಾಲ್‌ನ ಅಡಿಯಲ್ಲಿ ಕಾರು ಹಾದು ಹೋಗುವಷ್ಟು ಜಾಗ ಮೀಸಲಿಡಲಾಗಿದೆ. ಅಲ್ಲಿಂದ ಎಡಕ್ಕೆ ತಿರುಗುವ ಕಾರು, ಬಳಿಕ ವೇದಿಕೆ ಬಳಿ ತೆರಳಲಿದೆ.

‘ಚುನಾವಣೆ ಘೋಷಣೆ ಆದಮೇಲೆ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಸಭೆ ಇದು. ಪೆಂಡಲ್‌ನ ಅಡಿ ವಾಹನದಲ್ಲಿಯೇ ಪ್ರಧಾನಿ ಮೋದಿ ಅವರು ಜನರ ಮಧ್ಯದಲ್ಲಿ ಬರಲಿದ್ದಾರೆ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್.ರವಿಕುಮಾರ್‌ ತಿಳಿಸಿದರು.

ಇದನ್ನೂ ಓದಿ – ನಾಳೆ ಪ್ರಧಾನಿ ಭೇಟಿ, ಇವತ್ತೆ ವಿವಿಧ ಗ್ರಾಮ, ಬಡಾವಣೆಗಳ ರಸ್ತೆ ಬಂದ್‌, ಸಂಕಷ್ಟದಲ್ಲಿ ಜನ, ಪೊಲೀಸರ ಜೊತೆ ವಾಗ್ವಾದ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 17, 2024

Leave a Comment