
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020
ಹಾಫ್ ಡೇ ಲಾಕ್ ಡೌನ್ ಜಾರಿಯಾದರೂ ರಸ್ತೆಗಿಳಿದಿದ್ದ ವಾಹನಗಳ ತಪಾಸಣೆಗೆ ಖಾಕಿ ಪಡೆ ಫೀಲ್ಡಿಗಿಳಿದಿದೆ. ಪ್ರಮುಖ ಸರ್ಕಲ್ ಮತ್ತು ರಸ್ತೆಗಳಲ್ಲಿ ವಾಹನಗಳನ್ನು ತಡೆದು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಗಾಂಧಿ ಬಜಾರ್‍ನಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಅಂಗಡಿಗಳನ್ನು ಬಂದ್ ಮಾಡಿಸಿದರು. ವಾಹನಗಳನ್ನು ತಡೆದು ತಪಾಸಣೆ ನಡೆಸಿ, ಅವುಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ತಿಳಿಸಿದರು.

ಮತ್ತೊಂದೆಡೆ ಅಮೀರ್ ಅಹಮದ್ ಸರ್ಕಲ್‍ನಲ್ಲಿ ಡಿವೈಎಸ್‍ಪಿ ಈಶ್ವರ್ ಉಮೇಶ್ ನಾಯ್ಕ್ ಅವರು ವಾಹನಗಳ ತಪಾಸಣೆ ನಡೆಸಿದರು. ಇನ್ನು ಆಲ್ಕೊಳ ಸರ್ಕಲ್‍ನಲ್ಲಿ ಗ್ರಾಮಾಂತರ ಪೊಲೀಸ್ ಠಾನೆ ಇನ್ಸ್‍ಪೆಕ್ಟರ್ ಸಂಜೀವ್ ಕುಮಾರ್ ನೇತೃತ್ವದಲ್ಲಿ ತಪಾಸಣೆ ನಡೆಸಿ, ಸರಿಯಾದ ಕಾರಣ ನೀಡದ ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.
ನಗರದ ಹಲವೆಡೆ ವಿವಿಧ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಾಹನ ತಡೆದು ಕಾರಣ ಕೇಳುತ್ತಿದ್ದಾರೆ. ಅಗತ್ಯ ಸೇವೆಗಳಿಗಾಗಿ ಓಡಾಡುವವರಿಗೆ ಮಾತ್ರ ಅವಕಾಶವಿದೆ.
ಜನ ಸಂಚಾರಕ್ಕೆ ಕಾರಣವೇನು?
ಬ್ಯಾಂಕು, ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರಿ ನೌಕರರು ಓಡಾಡುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿ, ರೈತರು ಓಡಾಡಲು ಅವಕಾಶವಿದೆ. ಇದರ ಹೊರತಾಗಿ ಬಹುತೇಕರು ಆಸ್ಪತ್ರೆಗೆ ಬಂದಿರುವ ನೆಪ ಹೇಳುತ್ತಿದ್ದಾರೆ. ಇನ್ನೂ ಕಲೆವರು ಮೆಡಿಕಲ್ ಶಾಪ್‍ಗೆ ತೆರಳುತ್ತಿರುವುದಾಗಿ ತಿಳಿಸುತ್ತಿದ್ದಾರೆ. ಕೆಲವರಂತೂ ಬೇರೆ ಊರಿನಿಂದ ಬಂದಿದ್ದು, ಊರಿಗೆ ಮರಳುತ್ತಿರುವ ಸಬೂಬು ಹೇಳುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200