ಶಿವಮೊಗ್ಗದ ಲಾಡ್ಜ್‌ಗಳಲ್ಲಿ ಪೊಲೀಸರಿಂದ ದಿಢೀರ್‌ ತಪಾಸಣೆ, ಏನೆಲ್ಲ ಪರಿಶೀಲಿಸಿದರು?

ಶಿವಮೊಗ್ಗ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ನಗರದಾದ್ಯಂತ ಇರುವ ವಿವಿಧ ಲಾಡ್ಜ್‌ಗಳಲ್ಲಿ (lodges) ದಿಢೀರ್ ಪರಿಶೀಲನೆ ನಡೆಸಿದರು. ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ – ಭದ್ರಾ ಡ್ಯಾಮ್‌: ಜನವರಿ 31ರವರೆಗೆ ನದಿಗೆ ನೀರು, ಕಾರಣವೇನು? ಎಷ್ಟು ಹರಿಸಲಾಗುತ್ತದೆ?

 

ತಪಾಸಣೆ ವೇಳೆ ಅಧಿಕಾರಿಗಳು ಲಾಡ್ಜ್‌ಗಳಲ್ಲಿ ತಂಗಿರುವ ವ್ಯಕ್ತಿಗಳ ಮಾಹಿತಿ ಹಾಗೂ ರಿಜಿಸ್ಟರ್‌ಗಳನ್ನು ಪರಿಶೀಲಿಸಿದರು. ಪ್ರತಿ ಗ್ರಾಹಕರಿಂದ ಪಡೆದ ಗುರುತಿನ ಚೀಟಿ ದಾಖಲೆ ದೃಢಪಡಿಸಿಕೊಂಡರು. ಅಲ್ಲದೆ, ಲಾಡ್ಜ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯವೈಖರಿ ಮತ್ತು ಅವುಗಳ ಬ್ಯಾಕಪ್ ಸಂಗ್ರಹದ ಬಗ್ಗೆಯೂ ಮಾಹಿತಿ ಪಡೆದರು.

Police-check-in-Various-lodges-in-shivmaogga-city

ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಲಾಡ್ಜ್ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 20, 2026 at 6:20 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 20, 2026

Leave a Comment