ಸರ್ಕಲ್‌ನಲ್ಲಿ ದೀಪ ಬೆಳಗಿ, ರಸ್ತೆಯಲ್ಲೇ ಪಟಾಕಿ ಸಿಡಿಸಿದ ಪೊಲೀಸರು

 SHIVAMOGGA LIVE NEWS 

SHIMOGA | ನಗರದ ಪೊಲೀಸರು ರಸ್ತೆಯಲ್ಲಿಯೆ ದೀಪಾವಳಿ ಆಚರಣೆ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಅವರೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. (POLICE DEEPAVALI) (ಈ ಸುದ್ದಿಯನ್ನು ಇನ್ನು 90 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Shimoga Nanjappa Hospital

ನಗರದ ಶಿವಪ್ಪನಾಯಕ ವೃತ್ತದಲ್ಲಿ ಸಂಚಾರಿ ಠಾಣೆ ಪೊಲೀಸರು ವಿಭಿನ್ನವಾಗಿ ದೀಪಾವಳಿ ಆಚರಣೆ ಮಾಡಿದರು. ಕರ್ತವ್ಯದಲ್ಲಿ ಇದ್ದ ಸಂದರ್ಭ ಎಲ್ಲರೂ ಒಟ್ಟಾಗಿ ಪಟಾಕಿ ಹಚ್ಚಿ ಸಂಭ್ರಮ ಪಟ್ಟರು.

(POLICE DEEPAVALI)

ಸರ್ಕಲ್ ನಲ್ಲಿ ದೀಪ ಬೆಳಗಿದರು

ಕಳೆದ ರಾತ್ರಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಪೊಲೀಸರು ದೀಪ ಬೆಳಗಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಪಟಾಕಿ ಸಿಡಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ ಪಿ ಬಾಲರಾಜ್, ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್, ಸಂಚಾರಿ ಠಾಣೆ ಸಿಬ್ಬಂದಿ ಈ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

(POLICE DEEPAVALI)

ದೀಪಾವಳಿಯಲ್ಲೂ ಬಂದೋಬಸ್ತ್

ಶಿವಮೊಗ್ಗ ನಗರದ ಪೊಲೀಸರು ಈ ಭಾರಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಸಾಧ್ಯವಾಗಿಲ್ಲ. ಸೀಗೆಹಟ್ಟಿ, ಭರ್ಮಪ್ಪನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾರ್ಣವಾಗಿದ್ದು, ಯುವಕನ ಮೇಲೆ ಹಲ್ಲೆ, ವೆಂಕಟೇಶನಗರದಲ್ಲಿ ಯುವಕನ ಕೊಲೆ ಪ್ರಕರಣಗಳಿಂದಾಗಿ ನಗರದಲ್ಲಿ ಬಂದೋಬಸ್ತ್ ಹೆಚ್ಚಳ ಮಾಡಲಾಯಿತು. ಇದರಿಂದ ಶಿವಮೊಗ್ಗ ಪೊಲೀಸರು ಸೂಕ್ಷ್ಮಪ್ರದೇಶ, ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಬೇಕಾಯಿತು.

ಇದೆ ಕಾರಣಕ್ಕೆ ವಿಭಿನ್ನವಾಗಿ ದೀಪಾವಳಿ ಆಚರಣೆ ಮಾಡಿ, ಎಲ್ಲರು ಒಟ್ಟಾಗಿ ಪಟಾಕಿ ಸಿಡಿಸಿ ಖುಷಿ ಪಟ್ಟರು.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ | ಭದ್ರಾವತಿಯಲ್ಲಿ ಶಿವಮೊಗ್ಗದ ಆಟೋ ಚಾಲಕನ ಕೊಲೆ ಕೇಸ್, ಇಬ್ಬರು ಆರೆಸ್ಟ್, ಯಾರದು? ಕಾರಣವೇನು?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Shimoga-Police-Deepavali-on-duty

Leave a Comment