ಶಿವಮೊಗ್ಗದಲ್ಲಿ ಪೊಲೀಸರಿಂದ ರೂಟ್ ಮಾರ್ಚ್, ಗಮನ ಸೆಳೆದ ಕರೋನ ಪ್ರತಿಕೃತಿ, ಪೊಲೀಸರಿಗೆ ಚಪ್ಪಾಳೆ, ಹೂಮಳೆಯ ಸ್ವಾಗತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 22 ಏಪ್ರಿಲ್ 2020

ಕರೋನ ಜಾಗೃತಿ ಮತ್ತು ಲಾಕ್‌ಡೌನ್‌ ಮಹತ್ವ ತಿಳಿಸುವ ಸಲುವಾಗಿ ಶಿವಮೊಗ್ಗದಲ್ಲಿ ಇವತ್ತು ಪೊಲೀಸರು ರೂಟ್‌ ಮಾರ್ಚ್‌ ಮಾಡಿದರು. ಖಾಸಗಿ ಬಸ್‌ ನಿಲ್ದಾಣದಿಂದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ರೂಟ್‌ ಮಾರ್ಚ್‌ಗೆ ಚಾಲನೆ ನೀಡಿದರು.

ಗಮನ ಸೆಳೆದ ಕರೋನ ಪ್ರತಿಕೃತಿ

ಶಿವಮೊಗ್ಗ ನಗರದ ಎಲ್ಲಾ ಪೊಲೀಸ್‌ ಠಾಣೆ ಸಿಬ್ಬಂದಿಗಳು ಬೈಕ್‌ಗಳಲ್ಲಿ ರೂಟ್‌ ಮಾರ್ಚ್‌ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು, ಸಬ್‌ ಇನ್ಸ್‌ಪೆಕ್ಟರ್‌ಗಳು, ಡಿಎಆರ್‌, ಟ್ರಾಫಿಕ್‌ ಠಾಣೆ ಸಿಬ್ಬಂದಿಗಳು ರೂಟ್‌ ಮಾರ್ಚ್‌ನಲ್ಲಿ ಭಾಗವಹಿಸಿದ್ದರು. ಕರೋನ ಜಾಗೃತಿಗಾಗಿ ಪೊಲೀಸ್‌ ವಾಹನದ ಮೇಲೆ ಕರೋನ ಪ್ರತಿಕೃತಿ ಇರಿಸಲಾಗಿತ್ತು. ಇದು ರೂಟ್‌ ಮಾರ್ಚ್‌ನಲ್ಲಿ ಎಲ್ಲರ ಗಮನ ಸೆಳೆಯಿತು.

ಚಪ್ಪಾಳೆಯ ಸ್ವಾಗತ, ಕೆಲವೆಡೆ ಹೂಮಳೆ

ಗಾಂಧಿ ಬಜಾರ್‌ ಸೇರಿದಂತೆ ನಗರದ ವಿವಿಧೆಡೆ ರೂಟ್‌ ಮಾರ್ಚ್‌ ಮಾಡಿದ ಪೊಲೀಸರಿಗೆ ನಾಗರೀಕರು ಚಪ್ಪಾಳೆ ಮೂಲಕ ಸ್ವಾಗತಿಸಿದರು. ತಮ್ಮ ಮನೆಯ ಬಾಲ್ಕನಿಗಳು, ಟೆರೇಸ್‌ ಮೇಲೆ ನಿಂತು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಇನ್ನು ಕೆಲವು ಕಡೆಗೆ ಹೂಮಳೆ ಸುರಿಸಿದರು.  

92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 22, 2020

Leave a Comment