ಶಿವಮೊಗ್ಗದಲ್ಲಿ ಬಿಗಿ ಬಂದೋಬಸ್ತ್‌, ಸಾವಿರ ಸಾವಿರ ಪೊಲೀಸರ ನಿಯೋಜನೆ

ಶಿವಮೊಗ್ಗ: ಸೆ.6ರಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗ ನಗರದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸುಮಾರು 5 ಸಾವಿರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

ಹೇಗಿದೆ ಭದ್ರತಾ ವ್ಯವಸ್ಥೆ?

ಮೆರವಣಿಗೆ ಹಿನ್ನಲೆ 5 ಎಸ್‌ಪಿ, 2 ಎಎಸ್‌ಪಿ, 21 ಡಿವೈಎಸ್‌ಪಿ, 58 ಇನ್ಸ್‌ಪೆಕ್ಟರ್‌, 65 ಪಿಎಸ್‌ಐ, 198 ಪ್ರೊಬೆಷನರಿ ಪಿಎಸ್‌ಐ, 114 ಎಎಸ್‌ಐ, 2259 ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ಗಳು, 692 ಹೋಮ್‌ ಗಾರ್ಡ್ಸ್‌ ಸೇರಿದಂತೆ ಕೆಎಸ್‌ಆರ್‌ಪಿ, ಎಸ್‌ಎಎಫ್‌, ಆರ್‌ಎಎಫ್‌ ಸೇರಿದಂತೆ 5 ಸಾವಿರ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

Police-route-march-in-Shimoga-city

ನಗರದ ವಿವಿಧೆಡೆ ರೂಟ್‌ ಮಾರ್ಚ್‌

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಇವತ್ತು ಬ್ರೀಫಿಂಗ್‌ ನಡೆಸಲಾಯಿತು. ಶಿವಮೊಗ್ಗದ ಡಿಎಆರ್‌ ಮೈದಾನದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಪ್ರಮುಖ ಸೂಚನೆ ನೀಡಿದರು.

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಶಾಲೆಗಳಿಗೆ ರಜೆ ಘೋಷಣೆ

ಬ್ರೀಫಿಂಗ್‌ ಬಳಿಕ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಪೊಲೀಸ್‌ ಇಲಾಖೆ, ಕೆಎಸ್‌ಆರ್‌ಪಿ, ಡಿಎಆರ್‌, ಎಸ್‌ಎಎಫ್‌, ಆರ್‌ಎಎಫ್‌ ಸಿಬ್ಬಂದಿ ರೂಟ್‌ ಮಾರ್ಚ್‌ ನಡೆಸಿದರು. ಪ್ರಮುಖ ರಸ್ತೆಗಳು, ಸೂಕ್ಷ್ಮ ಪ್ರದೇಶಗಳು, ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ರೂಟ್‌ ಮಾರ್ಚ್‌ ನಡೆಸಲಾಯಿತು.

Police-route-march-in-Shimoga-city

Police-route-march-in-Shimoga-city

Police-route-march-in-Shimoga-city

Police-route-march-in-Shimoga-city

Police-route-march-in-Shimoga-city

police route march

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment