SHIVAMOGGA LIVE NEWS, 18 JANUARY 2025
ಶಿವಮೊಗ್ಗ : ಕರ್ಕಶ ಹಾರನ್‌ಗಳ (Horn) ಮೂಲಕ ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಖಾಸಗಿ ಬಸ್ ಚಾಲಕರಿಗೆ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪಶ್ಚಿಮ ಸಂಚಾರ ಠಾಣೆ ಪೊಲೀಸರು ದಿಢೀರ್ ತಪಾಸಣೆ ನಡೆಸಿ ಕರ್ಕಶ ಹಾರನ್ ತೆಗಿಸಿದ್ದಾರೆ.
ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಮಾರ್ಗದರ್ಶನದಲ್ಲಿ ಪಿಎಸ್‌ಐ ತಿರುಮಲೇಶ್ ಕಾರ್ಯಾಚರಣೆ ನಡೆಸಿದರು. ಕರ್ಕಶ ಶಬ್ದ ಮಾಡುವ ಹಾರನ್ ಬಳಸುತ್ತಿದ್ದ ಬಸ್ಸುಗಳನ್ನು ತಡೆದು ತಪಾಸಣೆ ನಡೆಸಿದರು. ಚಾಲಕರನ್ನು ಬಸ್ಸಿನಿಂದ ಕೆಳಗಿಳಿಸಿ ಹಾರಿನ ಬಳಿಸಿ ಕೂರಿಸಿ, ಹಾರನ್ ಬಾರಿಸಿ ಅರಿವು ಮೂಡಿಸಿದರು. ಕರ್ಕಶ ಶಬ್ದಗಳಿಂದ ಚಾಲಕರೆ ಕಿವಿ ಮುಚ್ಚಿಕೊಳ್ಳುತ್ತಿದ್ದಂತೆ, ಈ ಹಾರನ್ ತೆಗೆಸಬೇಕು ಎಂದು ಪೊಲೀಸರು ಸೂಚಿಸಿದರು.
ಎಎಸ್‌ಐ ಮೋಹನ್, ಸಿಬ್ಬಂದಿ ಪ್ರವೀಣ್ ಪಾಟೀಲ್, ಪ್ರಶಾಂತ್, ಗಿರೀಶ್ ಹರೀಶ್, ದಿನೇಶ್ ಕಾರ್ಯಾಚರಣೆ ನಡೆಸಿದರು. ಸಿಟಿ ಬಸ್ಸುಗಳು, ಶಾಲೆ, ಕಾಲೇಜುಗಳ ಬಸ್ಸುಗಳನ್ನು ತಡೆದು ತಪಾಸಣೆ ಮಾಡಲಾಯಿತು. ಇದರ ವಿಡಿಯೋ ಇಲ್ಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಸ್ ಡಿಕ್ಕಿ, ಗುಂಡಿಗೆ ಬಿದ್ದ ಸ್ಕೂಟಿ, ಬಾಲಕಿ ಬಲಗಾಲಿಗೆ ಗಂಭೀರ ಗಾಯ