ಹಂಸಿಣಿ ನೀರಾನೆಯ ಕೊನೆಕ್ಷಣದ CCTV ದೃಶ್ಯಾವಳಿ ರಿಲೀಸ್‌, ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ

Published On : ಏಪ್ರಿಲ್ 15, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದ ನೀರಾನೆ ಹಂಸಿಣಿಯ ಮರಣೋತ್ತರ ಪರೀಕ್ಷೆ (post mortem) ಪೂರ್ಣಗೊಂಡಿದೆ. ಸಾವಿಗೆ ಪ್ರಾಥಮಿಕ ಕಾರಣಗಳು ತಿಳಿದುಬಂದಿವೆ ಎಂದು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿಯಲ್ಲಿ ಏನೇನಿದೆ?

ಮರಣೋತ್ತರ ಪರೀಕ್ಷೆಯ ಪ್ರಕಾರ, ಹಂಸಿಣಿಗೆ ತೀವ್ರವಾದ ಯಕೃತ್ತಿನ ಸೋಂಕು ಉಂಟಾಗಿತ್ತು. ಈ ಸೋಂಕು ದೇಹದ ಅನೇಕ ಅಂಗಾಂಗಗಳಿಗೆ ವ್ಯಾಪಿಸಿ ‘ಸಿಸ್ಟಮಿಕ್ ಇನ್ಫೆಕ್ಷನ್’ ಆಗಿ ಪರಿಣಮಿಸಿದ್ದು ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಇದಲ್ಲದೆ, ಯೋನಿ ಮತ್ತು ಗರ್ಭಾಶಯದ ಬಾಯಿ ಭಾಗದಲ್ಲೂ ಸ್ಥಳೀಯವಾಗಿ ಸೋಂಕು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

Hamsini-Hippo-at-Shimoga-Zoo-in-Tyavarekoppa
post mortem

ಗರ್ಭದಲ್ಲೇ ಮೃತಪಟ್ಟ ಭ್ರೂಣ

ಹಂಸಿಣಿ ಗರ್ಭಿಣಿಯಾಗಿದ್ದು, ಇನ್ನು ಕೆಲವು ವಾರಗಳಲ್ಲಿ ಮರಿಗೆ ಜನ್ಮ ನೀಡುವ ಹಂತದಲ್ಲಿದ್ದಳು ಎಂದು ಊಹಿಸಲಾಗಿದೆ. ಆದರೆ ಹಂಸಿಣಿಯ ಮರಣದ ಬೆನ್ನಲ್ಲೇ ಗರ್ಭದಲ್ಲಿದ್ದ ಗಂಡು ಭ್ರೂಣವೂ ಸಹ ಮೃತಪಟ್ಟಿದೆ. ಸೋಂಕಿನ ನಿಖರ ಕಾರಣ ಪತ್ತೆಹಚ್ಚಲು ದೇಹದ ದ್ರವಗಳು ಮತ್ತು ಟಿಶ್ಯೂಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಮರಾಕ್ಷರ ಸ್ಪಷ್ಟಪಡಿಸಿದ್ದಾರೆ.

Hippopotamus-Hasmsini-at-Shimoga-Zoo-succumbed

ಕೊನೆ ಕ್ಷಣದ ವಿಡಿಯೋ ರಿಲೀಸ್‌

ಹಂಸಿಣಿ ನೀರಾನೆಯ ಕೊನೆಕ್ಷಣದ ಸಿಸಿಟಿವಿ ದೃಶ್ಯಾವಳಿಯನ್ನು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಬಿಡುಗಡೆ ಮಾಡಿದ್ದಾರೆ. ಕೊನೆಯುಸಿರೆಳೆಯುವ ಕೆಲವೇ ಹೊತ್ತಿಗೆ ಮುನ್ನ ಹಂಸಿಣಿ ನೀರಾನೆಯು, ತನ್ನ ಜಾಗದಲ್ಲಿ ಓಡಾಡಿತ್ತು. ಬಳಿಕ ನೀರಿನ ಕೊಳದಲ್ಲಿ ಹೋಗಿ ಮಲಗಿತ್ತು. ಏ.14ರಂದು ಮಧ್ಯಾಹ್ನ 3:08ಕ್ಕೆ ಅಲ್ಲಿಯೇ ಕೊನೆಯುಸಿರೆಳೆದಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 15, 2026

Leave a Comment